ADVERTISEMENT

ಶಂಕಿತ ಬಬ್ಬರ್‌ ಖಾಲ್ಸಾ ಉಗ್ರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಉಗ್ರಗಾಮಿ ಚಟು­ವಟಿಕೆ ನಡೆಸಲು ಸಿಖ್‌ ಪ್ರತ್ಯೇಕತಾವಾ­ದಿಗಳಿಗೆ ಬೆಂಬಲ ನೀಡಿದ ಆರೋಪದ ಮೇಲೆ ಅಮೆರಿಕ ಕೇಂದ್ರೀಯ ತನಿಖಾ ಸಂಸ್ಥೆ (ಎಫ್‌ಬಿಐ) ಭಾರತೀಯ ಮೂಲದ ಅಮೆರಿಕ ಪ್ರಜೆ ಬಲ್ವಿಂದರ್‌ ಸಿಂಗ್‌ ಎಂಬಾತನನ್ನು ಬಂಧಿಸಿದೆ. ಸಿಖ್‌ ಉಗ್ರಗಾಮಿ ಸಂಘಟನೆ ಬಬ್ಬರ್‌ ಖಾಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ), ಖಾಲಿಸ್ತಾನ ಜಿಂದಾಬಾದ್‌ ಫೋರ್ಸ್‌ (ಕೆಝ್‌ಎಫ್‌)ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನುವ ಆರೋಪ ಸಿಂಗ್‌ ಮೇಲಿದೆ.

‘ಅಮೆರಿಕದ ಮಿತ್ರ ರಾಷ್ಟ್ರವನ್ನು ಗುರಿ­ಯಾಗಿಸಿಕೊಂಡು ವಿದೇಶಿ ಉಗ್ರಗಾಮಿ ಸಂಘಟನೆಗಳು ನಡೆಸುವ ಕಾರ್ಯಾ­ಚರಣೆಗೆ ಸಿಂಗ್‌ ನೆರವಾಗುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಎಫ್‌ಬಿಐನ ಅಧಿಕಾರಿ ಲೌರಾ ಬಚೈಟ್‌ ತಿಳಿಸಿದ್ದಾರೆ. ಉಗ್ರಗಾಮಿ ಚಟುವಟಿಕೆಗೆ ನೆರವಾ­ಗಲು ಸಹ ಸಂಚುಗಾರರನ್ನು ಭೇಟಿ ಮಾಡಲು ಸಿಂಗ್‌ ಅಮೆರಿಕದಿಂದ ಪಾಕಿಸ್ತಾನ, ಭಾರತ ಮತ್ತು ಇತರ ದೇಶಗಳಿಗೆ ಹೋಗುತ್ತಿದ್ದ ಎನ್ನುವ ಆರೋಪವೂ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT