ADVERTISEMENT

ಶಾಲೆಗೆ ಗ್ರೆನೇಡ್ ತಂದ ಬಾಲಕಿ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಮೆಕ್ಸಿಕೊ ನಗರ (ಐಎಎನ್‌ಎಸ್/ಇಎಫ್‌ಇ): ಮೆಕ್ಸಿಕೊದ ಮೊರೆಲ್ಸ್ ರಾಜ್ಯದ ಕೌಟ್ಲ ನಗರದ ಪ್ರಾಥಮಿಕ ಶಾಲೆಗೆ ಒಂಬತ್ತು ವರ್ಷದ ಬಾಲಕಿಯೊಬ್ಬಳು ಗ್ರೆನೇಡ್ ತೆಗೆದುಕೊಂಡು ಬಂದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ತಕ್ಷಣವೇ ತುರ್ತು ಕರೆ ಮಾಡಿದ್ದರಿಂದ ಸೇನಾ ತುಕಡಿ, ಅಗ್ನಿಶಾಮಕ ದಳ, ತುರ್ತು ನಿರ್ವಹಣಾ ಸಿಬ್ಬಂದಿ ಒಟಿಲಿಯೊ ಮೊಮಟನೊ ಶಾಲೆಗೆ ಧಾವಿಸಿದರು. ನಂತರ ಗ್ರೆನೇಡ್‌ನ್ನು ಅವರಿಗೆ ಒಪ್ಪಿಸಲಾಯಿತು. ತನಿಖೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.