
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನಕ್ಕೆ ಭಾರತ ‘ಪರಮಾಪ್ತ ರಾಷ್ಟ್ರ’ ಎನಿಸುವ ದಿಸೆಯಲ್ಲಿ ಶೀಘ್ರ ಈ ಸಂಬಂಧ ಸರ್ಕಾರ ಘೋಷಣೆ ಹೊರ ಡಿಸುವ ಸಾಧ್ಯತೆ ಇದೆ.
‘ವಿದೇಶ ವ್ಯಾಪಾರದ ವಿಷಯದಲ್ಲಿ ಪಾಕಿಸ್ತಾನದ ಎರಡು ಪ್ರಮಖ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಭಾರತದಿಂದ ಸ್ಪಷ್ಟ ಸಮ್ಮತಿ ಸಿಕ್ಕಿದೆ. ಹಾಗಾಗಿ ಪರಮಾಪ್ತ ರಾಷ್ಟ್ರ (ಎಂ ಎಫ್‌ಎನ್) ಸ್ಥಾನಮಾನ ನೀಡ ಲಾಗು ತ್ತಿದೆ’ ಎಂದು ‘ದಿ ನೇಷನ್’ ವರದಿ ಮಾಡಿದೆ.
ಎಂಎಫ್‌ಎನ್ ಸ್ಥಾನಮಾನ ನೀಡುವುದರಿಂದ ಪಾಕಿಸ್ತಾನದ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರಲಿದ್ದು, ಉಭಯ ರಾಷ್ಟ್ರಗಳ ಆಮದು –ರಫ್ತು ವ್ಯವಹಾರವೂ ಗಣನೀಯವಾಗಿ ಹೆಚ್ಚಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.