ADVERTISEMENT

ಶ್ರೀಲಂಕಾಕ್ಕೆ ತೆರಳಬೇಕಿದ್ದ ನತದೃಷ್ಟ ಪ್ರವಾಸಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಡಚ್ (ನೆದರ್ಲೆಂಡ್) ಪ್ರಜೆಯೊಬ್ಬನಿಂದ ಹತ್ಯೆಗೀಡಾದ ಬ್ರಿಟನ್ ಯುವತಿ ಸಾರಾ ಗ್ರೋವ್ಸ್ ಪ್ರವಾಸಕ್ಕಾಗಿ ಶ್ರೀಲಂಕಾಗೆ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ತನ್ನ ಯೋಜನೆ ಬದಲಾಯಿಸಿ ಕಣಿವೆ ರಾಜ್ಯಕ್ಕೆ ತೆರಳಿದ್ದಳು ಎಂದು ಆಕೆಯ ಪೋಷಕರು ಹೇಳಿದ್ದಾರೆ.

ಶವ ಹಸ್ತಾಂತರ (ಶ್ರೀನಗರ ವರದಿ): ಈ ಮಧ್ಯೆ, ಯುವತಿಯ ಶವವನ್ನು ಮಂಗಳವಾರ ಬ್ರಿಟನ್ ಹೈಕಮಿಷನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು,  ಬ್ರಿಟನ್‌ಗೆ ಕೊಂಡೊಯ್ಯಲಿದ್ದಾರೆ. ಶವ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.