ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಸಹೋದ್ಯೋಗಿಯಿಂದ ಆರು ಪೊಲೀಸರ ಹತ್ಯೆ
ಕಂದಹಾರ್ (ಎಎಫ್‌ಪಿ): ದಕ್ಷಿಣ ಆಫ್ಘಾನಿಸ್ತಾನದ ಗಿರ್ಶೆಕ್ ಜಿಲ್ಲೆಯಲ್ಲಿ ಸಹೋದ್ಯೋಗಿಯೊಬ್ಬ ಆರು ಪೊಲೀಸರಿಗೆ ವಿಷ ಉಣಿಸಿ, ನಂತರ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಕಡಲ್ಗಳ್ಳರ ಬಂಧನ
ಕ್ವಾಲಾಲಂಪುರ (ಪಿಟಿಐ): ಮಲೇಷ್ಯಾದ ಬೊರ್ನೊ ದ್ವೀಪದ ಬಳಿ ಸರಕು ಸಾಗಾಣೆ ಹಡಗನ್ನು ಅಪಹರಿಸಲು ಯತ್ನಿಸಿದ ಇಂಡೋನೇಷ್ಯಾದ ನಾಲ್ವರು ಕಡಲ್ಗಳ್ಳರನ್ನು ನೌಕಾ ಪಡೆ ಬಂಧಿಸಿದೆ. ಹಡಗಿನಲ್ಲಿದ್ದ ನಾಲ್ವರು ಭಾರತೀಯರೂ ಸೇರಿದಂತೆ ಒಟ್ಟು ಒಂಬತ್ತು ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. 

ಪಾಕ್‌ನಲ್ಲಿ ಚರ್ಚ್‌ಗಳ ಮೇಲೆ ದಾಳಿ
ಇಸ್ಲಾಮಾಬಾದ್ (ಪಿಟಿಐ): ಕಳೆದ ಹತ್ತು ದಿನದಲ್ಲಿ ದಕ್ಷಿಣ ಪಾಕಿಸ್ತಾನ, ಕರಾಚಿ ಮುಂತಾದೆಡೆ ದುಷ್ಕರ್ಮಿಗಳು ಎರಡು ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಭಾರತ-ಪಾಕ್‌ಗೆ ಒಂದೇ ಕರೆನ್ಸಿ: ಪಿಪಿಪಿ ಸಲಹೆ
ಲಾಹೋರ್ (ಪಿಟಿಐ):ವ್ಯಾಪಾರ ಸಂಬಂಧ ವೃದ್ಧಿಸಲು ಭಾರತ ಮತ್ತು ಪಾಕಿಸ್ತಾನಗಳು ಒಂದೇ ಬಗೆಯ ಕರೆನ್ಸಿ (ನೋಟು) ಚಲಾವಣೆಗೆ ತರುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ ಎಂದು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖಂಡ ಜಹಾಂಗೀರ್ ಬದ್ರ್ ಸಲಹೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.