`ದಿ ಇಂಡಿಪೆಂಡೆಂಟ್' ಸಂಪಾದಕ ಅಮೋಲ್
ಲಂಡನ್ (ಪಿಟಿಐ): ಭಾರತೀಯ ಮೂಲದ ಪತ್ರಕರ್ತ ಅಮೋಲ್ ರಾಜನ್ (29) ಇಂಗ್ಲಂಡ್‌ನ ಪ್ರತಿಷ್ಠಿತ ರಾಷ್ಟ್ರೀಯ ವೃತ್ತಪತ್ರಿಕೆ `ದಿ ಇಂಡಿಪೆಂಡೆಂಟ್'ಗೆ ಸಂಪಾದಕರಾಗಿ ಆಯ್ಕೆಯಾಗಿದ್ದಾರೆ.
ಕ್ರಿಸ್ ಬ್ಲ್ಯಾಕ್‌ಹರ್ಸ್ಟ್ ಅವರ ಸ್ಥಾನದಲ್ಲಿ ಸಂಪಾದಕೀಯ ವಿಭಾಗದ ಮುಖ್ಯಸ್ಥರನ್ನಾಗಿ ರಾಜನ್ ಅವರನ್ನು ನೇಮಕಮಾಡಲಾಗಿದ್ದು ಪತ್ರಿಕೆಯ ಮೊದಲ ಬಿಳಿಯೇತರ ಸಂಪಾದಕ ಎನಿಸಿದ್ದಾರೆ. ಈ ಮೊದಲು ರಾಜನ್ ಇದೇ ಪತ್ರಿಕೆಯಲ್ಲಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಸೀದಿಯಲ್ಲಿ ವಾಗ್ವಾದ: ನಾಲ್ವರಿಗೆ ಇರಿತ
ಲಂಡನ್(ಪಿಟಿಐ): ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಮಸೀದಿಯಲ್ಲಿ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಒಬ್ಬರನ್ನು ಸೇರಿದಂತೆ ನಾಲ್ಕು ಜನರನ್ನು ಇರಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.