ಸನಾ (ಎಎಫ್‌ಪಿ): ಯೆಮೆನ್ ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲ ಸಲೆಹ ಅವರಿಗೆ ನಿಷ್ಠರಾಗಿರುವ ಸೇನಾ ಪಡೆಗಳ ಬೆದರಿಕೆಯಿಂದಾಗಿ ಇಲ್ಲಿಯ ವಿಮಾನ ನಿಲ್ದಾಣವನ್ನು ಶನಿವಾರ ಬಂದ್ ಮಾಡಲಾಯಿತು.
ಸಲೆಹ ಅವರ ಸಹೋದರ, ವಾಯುಪಡೆ ಮುಖ್ಯಸ್ಥ ಮಹಮ್ಮದ್ ಸಲೆಹ ಹಾಲಿ ಅಧ್ಯಕ್ಷ ಅಬ್ದುಲ್ ರಬ್ ಮನ್ಸೂರ್ ಹಾದಿ ಅವರಿಂದ ಪದಚ್ಯುತಗೊಂಡಿದ್ದರೂ ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸಿದ್ದು, ಅವರಿಗೆ ನಿಷ್ಠರಾದ ಪಡೆಗಳು ವಿಮಾನ ನಿಲ್ದಾಣ ಸುತ್ತುವರೆದಿವೆ. ಹೀಗಾಗಿ ವಿಮಾನಯಾನ ಸೇವೆ ಸ್ಥಗಿತಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.