ADVERTISEMENT

ಸಹಾರಾ ಹೋಟೆಲ್‌ಗಳಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಲಂಡನ್‌ (ಪಿಟಿಐ): ಭಾರತದಲ್ಲಿ ಸಹಾರಾ ಸಮೂಹ ಕಂಪೆನಿ ಬಿಕ್ಕಟ್ಟು ಎದುರಿಸುತ್ತಿದ್ದರೂ ವಿದೇಶದಲ್ಲಿಈ ಸಮೂಹದ ಹೊಟೇಲ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ.

ವಿದೇಶದಲ್ಲಿರುವ ಸಹಾರಾ ಸಮೂ ಹದ ಆಸ್ತಿಯನ್ನು  ಮಾರುವುದಾಗಿ ಕಂಪೆನಿ ಹೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಲಂಡನ್‌ನ ಗ್ರಾಸ್‌ವೆನೋರ್‌ ಹೌಸ್‌, ನ್ಯೂಯಾರ್ಕ್‌ ಪ್ಲಾಸಾ, ಡ್ರೀಮ್‌ಟೌನ್‌ ಹೋಟೆಲ್‌ಗಳಲ್ಲಿ ಸಹಾರಾ ಹೋಟೆಲ್‌ ಗಳಿಗೆ ಇನ್ನೂ ಭಾರಿ ಬೇಡಿಕೆ ಇದೆ.

ಈ ಸಮೂಹದ ಹೋಟೆಲ್‌ನ್ನು ಹೆಚ್ಚು ಬೆಲೆಗೆ ಕೊಳ್ಳಲು ಹಲವರು ಮುಂದೆ ಬಂದರಾದರೂ ಒಳ್ಳೆಯ ಬೆಲೆ ಸಿಗದೆ ಮಾರುವುದಿಲ್ಲವೆಂದು ಕಂಪೆನಿ ಹೇಳಿದೆ.  ಈ ಮೂರು ಹೋಟೆಲ್‌ಗಳನ್ನು ಸಹಾರಾ ಕೆಲವರ್ಷಗಳ ಹಿಂದೆ ಖರೀದಿ ಸಿತ್ತು. ಇವುಗಳ ಒಟ್ಟು ಮೌಲ್ಯ ₨68,000 ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.