ADVERTISEMENT

ಸಾಕ್ಷ್ಯಾಧಾರಗಳ ಪರಿಶೀಲನೆ: ಪಾಕ್

ಪಿಟಿಐ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ಸಾಕ್ಷ್ಯಾಧಾರಗಳ ಪರಿಶೀಲನೆ: ಪಾಕ್
ಸಾಕ್ಷ್ಯಾಧಾರಗಳ ಪರಿಶೀಲನೆ: ಪಾಕ್   

ಇಸ್ಲಾಮಾಬಾದ್‌: ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಪರಿಶೀಲಿಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ.

ಜಾಧವ್‌ ಅವರು ಕಳೆದ ತಿಂಗಳು ಸೇನಾ ಮುಖ್ಯಸ್ಥರಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸೇನಾ ಮುಖ್ಯಸ್ಥರು ಈ ಕ್ರಮ ಕೈಗೊಂಡಿದ್ದಾರೆ.
ಸೇನಾ ನ್ಯಾಯಾಲಯ ಜಾಧವ್‌ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಳಿಕ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ, ಈಗ ಸೇನಾ ಮುಖ್ಯಸ್ಥರು ಕೈಗೊಳ್ಳುವ ನಿರ್ಧಾರ ಮಹತ್ವದ್ದಾಗಿದೆ.

‘ಜಾಧವ್‌ ಅವರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಸೇನಾ ಮುಖ್ಯಸ್ಥರು ಪರಾಮರ್ಶಿಸುತ್ತಿದ್ದಾರೆ. ಬಳಿಕ, ಜಾಧವ್‌ ಅವರ ಮನವಿ ಕುರಿತು ಸೇನಾ ಮುಖ್ಯಸ್ಥರು  ಅರ್ಹತೆ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಸೇನಾ ವಕ್ತಾರ ಮೇಜರ್‌ ಜನರಲ್‌ ಅಸೀಫ್‌ ಗಫೂರ್‌ ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಕಾನೂನು ಪ್ರಕಾರ ಜಾಧವ್‌ ಅವರು ಕ್ಷಮಾದಾನಕ್ಕೆ ಸೇನಾ ಮುಖ್ಯಸ್ಥರಿಗೆ ಮನವಿ ಸಲ್ಲಿಸಬಹುದು. ಸೇನಾ ಮುಖ್ಯಸ್ಥರು ಸಹ ತಿರಸ್ಕರಿಸಿದರೆ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.