ADVERTISEMENT

ಸಿರಿಯಾದಲ್ಲಿ ಪತನಗೊಂಡ ರಷ್ಯಾ ವಿಮಾನ ; 32 ಮಂದಿ ಸಾವು

ಏಜೆನ್ಸೀಸ್
Published 6 ಮಾರ್ಚ್ 2018, 14:45 IST
Last Updated 6 ಮಾರ್ಚ್ 2018, 14:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ರಷ್ಯಾದ ವಿಮಾನವು ಸಿರಿಯಾದಲ್ಲಿ ಪತನಗೊಂಡಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಆ ದೇಶದ ರಕ್ಷಣಾ ಸಚಿವಾಲಯ ಹೇಳಿದೆ.

ವಿಮಾನದಲ್ಲಿನ ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಸಿರಿಯಾ ಗಡಿ ಸಮೀಪದ ಲಟಾಕಿಯದ ಮೆಯ್ಮಿಮ್ ವಾಯುನೆಲೆ ಬಳಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಒಟ್ಟು 26 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.