ಇಸ್ಲಾಮಾಬಾದ್ (ಪಿಟಿಐ): ಪಾಕ್ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಗುಂಪುಗಳು ಮತ್ತು ಪಾಕ್‌ನ ಕೆಲವು ಉಗ್ರರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಮಂಡಳಿಯಲ್ಲಿ ಅಪಸ್ವರ ಕೇಳಿಬಂದಿದ್ದು, `ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್~ (ಟಿಟಿಪಿ) `ಪಾಕ್ ಸೇನೆಯೆಡೆಗೆ ದಯೆ ತೋರುವ ಪ್ರಶ್ನೆಯೇ ಇಲ್ಲ~ ಎಂದು ಮಂಗಳವಾರ ಹೇಳಿದೆ.
ಹಕೀಮುಲ್ಲಾ ಮೆಹಸೂದ್ ನೇತೃತ್ವದ ಟಿಟಿಪಿ, ಪಾಕ್ ಸೇನೆ ವಿರುದ್ಧ ಕದನ ವಿರಾಮ ಘೋಷಿಸಲು ನಿರಾಕರಿಸಿದೆ. ತಮ್ಮ ಸಂಘಟನೆಯ ಸದಸ್ಯರು ಪಾಕಿಸ್ತಾನದಲ್ಲಿ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದೂ ಸ್ಪಷ್ಟಪಡಿಸಿದೆ.
`ನಾಗರಿಕರ ಹತ್ಯೆ ಅಥವಾ ಹಣಕ್ಕಾಗಿ ಅಪಹರಣ ಮಾಡುವುದಿಲ್ಲ ಎಂಬ ಒಡಂಬಡಿಕೆಗೆ ಒಪ್ಪಿದ್ದೇವೆಯೇ ಹೊರತು, ಪಾಕ್ ಸೇನೆ ಮೇಲೆ ದಾಳಿ ನಡೆಸುವುದಿಲ್ಲ ಎಂಬ ಕರಾರನ್ನು ನಾವು ಒಪ್ಪಿಲ್ಲ. ಪಾಕ್ ಸೇನೆ ವಿರುದ್ಧ ಭವಿಷ್ಯದಲ್ಲೂ ಕದನ ವಿರಾಮ ಘೋಷಿಸುವ ಆಲೋಚನೆ ಇಲ್ಲ~ ಎಂದು ಟಿಟಿಪಿ ವಕ್ತಾರ ಎಹಸಾನುಲ್ಲಾ ಎಹಸಾನ್ ಸ್ಪಷ್ಟಪಡಿಸಿರುವುದಾಗಿ ಪ್ರಮುಖ ದೈನಿಕವೊಂದು ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.