ADVERTISEMENT

ಸೌದಿ ಸಂಸತ್‌ನಲ್ಲಿ ಸ್ತ್ರೀಯರಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ರಿಯಾದ್ (ಐಎಎನ್‌ಎಸ್): ಸೌದಿ ಅರೇಬಿಯಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಲ್ಲಿನ ಸಂಸತ್ತಿನಲ್ಲಿ ಮಹಿಳೆಯರು ಶೇ 10ರಷ್ಟು ಪ್ರಾತಿನಿಧ್ಯ ಪಡೆಯಲಿದ್ದಾರೆ.

ಮುಂಬರುವ ಸಂಸತ್ ರಚನೆ ವೇಳೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಸೌದಿ ಅರೇಬಿಯಾದ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್‌ಅಜೀಜ್ ಅಲ್ ಸೌದ್ ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಅದನ್ನೀಗ ಅವರು ಕಾರ್ಯರೂಪಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

ಸಂಪೂರ್ಣ ರಾಜಪ್ರಭುತ್ವದ ಈ ರಾಷ್ಟ್ರದಲ್ಲಿ ಸಂಸದರಿಗೆ ಕಾನೂನಿಗೆ ಅಂಗೀಕಾರ ನೀಡುವ ಅಧಿಕಾರ ಇಲ್ಲ. ಆದರೆ ಹೊಸ ಕಾನೂನು ರಚನೆಗೆ ಸಂಬಂಧಿಸಿದಂತೆ ರಾಜನ ಮುಂದೆ ಪ್ರಸ್ತಾವ ಮಂಡಿಸುವ ಸೀಮಿತ ಅಧಿಕಾರ ಮಾತ್ರ ಇದೆ.

ಸಂಸತ್ 150 ಸದಸ್ಯರನ್ನು ಒಳಗೊಂಡಿರಲಿದ್ದು ಎಲ್ಲರನ್ನೂ ದೊರೆಯೇ ಆಯ್ಕೆ ಮಾಡಲಿದ್ದಾರೆ. ಈಗ ಶೇ 10ರಷ್ಟು ಪ್ರಾತಿನಿಧ್ಯ ಮಹಿಳೆಯರಿಗೆ ಸಿಗುವುದರಿಂದ ಅಲ್ಲಿನ ಸಂಸತ್ತಿನಲ್ಲಿ 15 ಸಂಸತ್ ಸದಸ್ಯರು ಮಹಿಳೆಯರು ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.