ADVERTISEMENT

ಸ್ಕಾಟ್ಲೆಂಡ್‌ಗೆ ಸ್ವಾತಂತ್ರ್ಯ: ಜನರ ಬೆಂಬಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಲಂಡನ್, (ಎಎಫ್‌ಪಿ): ಬ್ರಿಟನ್‌ನಿಂದ ಸ್ಕಾಟ್ಲೆಂಡ್‌ಗೆ ಮರಳಿ ಸ್ವಾತಂತ್ರ್ಯ ನೀಡುವುದನ್ನು ಬೆಂಬಲಿಸಿ ಬ್ರಿಟನ್ ಮತದಾರರು ಸರಳ ಬಹುಮತ ನೀಡಿದ್ದು, ಭಾನುವಾರ ಜನರ ಅಭಿಪ್ರಾಯ ಪ್ರಕಟವಾಗಿದೆ.

ಕೆಲವು ತಿಂಗಳಿನಿಂದ ಸ್ಕಾಟ್ಲೆಂಡ್‌ಗೆ ಬೆಂಬಲ ತೀವ್ರವಾಗಿ ಹೆಚ್ಚಳವಾಗುತ್ತಿರುವುದನ್ನು ಸಂಡೆ ಮಿರರ್ ಹಾಗೂ ದ ಇಂಡಿಪೆಂಡಂಟ್ ಆನ್ ಸಂಡೆ ಪತ್ರಿಕೆಗಳಿಗಾಗಿ ನಡೆದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಇಂಗ್ಲೆಂಡ್‌ನ ಶೇ 39 ರಷ್ಟು ವಯಸ್ಕರು ಸ್ಕಾಟ್ಲೆಂಡ್ ಸ್ವತಂತ್ರವಾಗಲು ಬೆಂಬಲಿಸಿದ್ದರೆ ಶೇ 38 ಜನರು ಇದನ್ನು ವಿರೋಧಿಸಿದ್ದಾರೆ.

ಸ್ಕಾಟ್ಲೆಂಡ್‌ನ ಮೊದಲ ಸಚಿವ ಅಲೆಕ್ಸ್ ಸಾಲಮಂಡ್ ಅವರ `ಸ್ಕಾಟ್ಲೆಂಡ್ ರಾಷ್ಟ್ರೀಯ ಪಕ್ಷ~ (ಎಸ್‌ಎನ್‌ಪಿ) ಸ್ವಾತಂತ್ರ್ಯದ ಪರವಾಗಿದೆ. ಮೇನಲ್ಲಿ ಗೆದ್ದ ಅವರ ಪಕ್ಷ ಐದು ವರ್ಷದ ಅವಧಿಯ ಕೊನೆಗೆ ಈ ವಿಷಯದ ಕುರಿತಂತೆ ಜನಮತ ಸಂಗ್ರಹಿಸಲು ಬಯಸಿತ್ತು.

ADVERTISEMENT

ಬ್ರಿಟನ್ ಸರ್ಕಾರದ ಸಚಿವಾಲಯ ಸ್ಕಾಟ್ಲೆಂಡ್‌ಗೆ ಸಂಬಂಧಿಸಿದ ಸಂಗತಿಗಳೊಂದಿಗೆ ವ್ಯವಹರಿಸುತ್ತಿದೆ. ಸಾಲ್ಮಂಡ್‌ರ ಎಡಿನ್‌ಬರ್ಗ್ ಸರ್ಕಾರ ಸ್ಕಾಟ್ಲೆಂಡ್ ಜನರ ಸ್ವಾತಂತ್ರ್ಯದ ಬಗೆಗಿನ ಯೋಜನೆಗಳ ಇನ್ನಷ್ಟೆ ವಿವರಗಳನ್ನು ನೀಡಬೇಕಿದೆ ಎಂದು ಸ್ಕಾಟ್ಲೆಂಡ್ ಕಚೇರಿಯ ವಕ್ತಾರರು ಹೇಳಿದ್ದಾರೆ.

`ಸ್ವಾತಂತ್ರ್ಯ ಸಿಗುವವರೆಗೆ ನಾವು ಒತ್ತಾಯವನ್ನು ಮುಂದುವರಿಸಲಿದ್ದೇವೆ. ಇದೇ ಸಮಯದಲ್ಲಿ ಸ್ಕಾಟ್ಲೆಂಡ್ ಬ್ರಿಟನ್‌ನಿಂದ ಬೇರೆಯಾಗುವ ವಿಷಯವನ್ನು ಧನಾತ್ಮಕ ಹಾಗೂ ಶಕ್ತಿಯುತವಾಗಿ ಮಾಡಲಿದ್ದೇವೆ~ ಎಂದು ಅವರು ತಿಳಿಸಿದ್ದಾರೆ.

ಯೂರೋಪ್‌ನಲ್ಲಿ ಸಹಭಾಗಿಗಳಾಗಿ ಕೆಲಸ ಮಾಡುವುದು ಹಾಗೂ ದೇಶಗಳು ಪರಸ್ಪರ ಹಂಚಿಕೊಳ್ಳುವುದು, ಎರಡು ಸ್ವತಂತ್ರ ದೇಶಗಳೊಂದಿಗೆ ನಮ್ಮ ದೇಶಗಳು ಏಕತೆಯ ಸಂಬಂಧ  ಹೊಂದುವುದು ಹಾಗೂ ಮತದಾನ ಸ್ಕಾಟ್ಲೆಂಡ್, ಇಂಗ್ಲೆಂಡ್‌ನಲ್ಲಿ ಪರಿಣಾಮಕಾರಿ ಬೆಂಬಲ ತೋರಿಸಿದೆ ಎಂದು ಸ್ಕಾಟ್ಲೆಂಡ್ ರಾಷ್ಟ್ರೀಯ ಪಕ್ಷದ ಚಳವಳಿಯ ನಿರ್ದೇಶಕ ಅಂಗಸ್ ರಾಬರ್ಟ್‌ಸನ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.