
ಪ್ರಜಾವಾಣಿ ವಾರ್ತೆನ್ಯೂಯಾರ್ಕ್ (ಪಿಟಿಐ): ಮಬ್ಬುಮಬ್ಬಾದ ಒಂದು ಸಾವಿರ ತಾರೆಗಳ ಸಮೂಹದ ಕುಬ್ಜ ಆಕಾಶಗಂಗೆಯೊಂದು ಕ್ಷೀರಪಥದಲ್ಲಿ ಪತ್ತೆಯಾಗಿದೆ. ಇದು ಇದುವರೆಗೂ ಗುರುತಿಸಿರುವ ಆಕಾಶಗಂಗೆಗಳಲ್ಲೇ ಅತ್ಯಂತ ಹಗುರವಾದುದು ಎಂದು ಖಗೋಳ ವಿಜ್ಞಾನಿಗಳ ತಂಡ ಹೇಳಿದೆ.
ಈ ಕುಬ್ಜ ಆಕಾಶಗಂಗೆಯನ್ನು `ಸೆಗ್ವೇ-2' ಎಂದು ಗುರುತಿಸಲಾಗಿದ್ದು, ಇದನ್ನು `ಇಲಿಗಿಂತ ಚಿಕ್ಕದಾದ ಆನೆ'ಗೆ ಹೋಲಿಸಲಾಗಿದೆ.
ಕ್ಯಾಲಿಫೋನಿರ್ಯಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳ ತಂಡ ಈ ಸಂಶೋಧನೆ ಮಾಡಿದ್ದು, ಈ ತಂಡದಲ್ಲಿ ಭಾರತ ಮೂಲದ ಮನೋಜ್ ಕಪ್ಲಿನ್‌ಘಾಟ್ ಕೂಡ ಇದ್ದಾರೆ. ಈ ಸಂಶೋಧನೆಯು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.