ಇಸ್ಲಾಮಾಬಾದ್ (ಐಎಎನ್‌ಎಸ್): ಪತನವಾದ ವಿಮಾನಕ್ಕೆ ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಬಾರದಿತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆಯು ಪ್ರತಿಕೂಲ ವಾತಾವರಣದ ವರದಿಯನ್ನು ನಾಗರಿಕ ವಿಮಾನಯಾನ ಸಂಸ್ಥೆಗೆ ಶುಕ್ರವಾರ ಎರಡು ಸಾರಿ ನೀಡಿತ್ತು. ಗಾಳಿ ಒತ್ತಡ ತೀವ್ರವಾಗಿರುವುದರಿಂದ ವಿಮಾನಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿತ್ತು. ಹಾಗಾಗಿ ವಿಮಾನವನ್ನು ಇಸ್ಲಾಮಾಬಾದ್ ನಿಲ್ದಾಣದಲ್ಲಿ ಇಳಿಸುವ ಬದಲು ಲಾಹೋರ್ ನಿಲ್ದಾಣದಲ್ಲಿ ಇಳಿಸಲು ಸೂಚಿಸಬೇಕಿತ್ತು ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕರು ಹೇಳಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ನೀಡಿದ್ದ ಮೊದಲ ಎಚ್ಚರಿಕೆಯಲ್ಲೇ ಅಪಘಾತಗಳು ಸಂಭವಿಸಬಹುದು ಎಂದು ಹೇಳಿದ್ದ ಹವಾಮಾನ ಇಲಾಖೆ, ಸಂಜೆ 6ಕ್ಕೆ ನೀಡಿದ್ದ ಮತ್ತೊಂದು ಎಚ್ಚರಿಕೆಯಲ್ಲೂ ಇದನ್ನೇ ಸೂಚಿಸಿತ್ತು.
ಕರಾಚಿಯಿಂದ ಸಂಜೆ 5ಗಂಟೆಗೆ ಹೊರಟ ವಿಮಾನವು 6.40ರ ಹೊತ್ತಿಗೆ ನಿಯಂತ್ರಣ ಗೋಪುರದ ಸಂಪರ್ಕ ಕಳೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.