ADVERTISEMENT

ಹೋರಾಟಗಾರರಿಗೆ ಮನೆಗೆ ಮರಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 13:05 IST
Last Updated 2 ಫೆಬ್ರುವರಿ 2011, 13:05 IST

ಕೈರೊ (ಡಿಪಿಎ): ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಪದಚುತ್ಯಗೊಳಿಸಲು ನಡೆಸುತ್ತಿರುವ ಪ್ರತಿಭಟನೆಯನ್ನು ದೇಶದ ಸ್ಥಿರತೆಯ ದೃಷ್ಟಿಯಿಂದ ಮುಕ್ತಾಯಗೊಳಿಸಿ ಮನೆಗೆ ಮರಳಬೇಕೆಂದು ಬುಧವಾರ ಈಜಿಪ್ಟ್ ಸೇನಾ ವಕ್ತಾರರು ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದಾರೆ.ಮುಂಜಾನೆ ಸಾವಿರಾರು ಸಂಖ್ಯೆಯಲ್ಲಿ ಮತ್ತೆ ಜಮಾಯಿಸಿದ ಪ್ರತಿಭಟನಾಕಾರರು ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ವಿರುದ್ಧ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ತಹ್ರಿರ್ ಚೌಕದತ್ತ ತೆರಳುತ್ತಿದ್ದರು.
 
ಆ ವೇಳೆಗೆ  ಸರ್ಕಾರಿ ಟಿ.ವಿ ವಾಹಿನಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೇನಾ ವಕ್ತಾರರು ಪ್ರತಿಭಟನೆಯನ್ನು ಮೊಟಕುಗೊಳಿಸಿ ಮನೆಗೆ ಮರಳುವಂತೆ ವಿನಂತಿಸಿಕೊಂಡಿದ್ದಾರೆ.ಮಂಗಳವಾರ ಮಾತನಾಡಿದ ಅಧ್ಯಕ್ಷ ಮುಬಾರಕ್ ತನ್ನ ಅಧಿಕಾರದ ಅವಧಿ ಸೆಪ್ಟೆಂಬರ್‌ವರೆಗಿದ್ದು, ಆನಂತರದಲ್ಲಿ ತಾನು ಅಧಿಕಾರದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಕೈರೊದಲ್ಲಿ ಸರ್ಕಾರದ ಪರವಾಗಿ ರ್ಯಾಲಿಗಳನ್ನು ಆಯೋಜಿಸಲು ಯೋಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.