
ಪ್ರಜಾವಾಣಿ ವಾರ್ತೆದುಬೈ (ಪಿಟಿಐ): ದುಬೈಯ ಐಷಾರಾಮಿ ಹೋಟೆಲ್ ಬುರ್ಜ್ ಅಲ್ ಅರಬ್ ತನ್ನ 212 ಮೀಟರ್ ಎತ್ತರದ ಹೆಲಿಪ್ಯಾಡ್ನಲ್ಲಿ ಭಾರಿ ಔತಣ ಕೂಟವೊಂದನ್ನು ಏರ್ಪಡಿಸಿದ್ದು ಅದರ ಬೆಲೆಯೂ ಅಷ್ಟೇ ದುಬಾರಿಯಾಗಿದೆ. ಒಬ್ಬ ವ್ಯಕ್ತಿ ಪಾವತಿಸಬೇಕಾದ ಕನಿಷ್ಠ ಮೊತ್ತವೇ ಸುಮಾರು ₨ 1.70 ಲಕ್ಷ!
ಈ ಔತಣದಲ್ಲಿ 12 ಜನರಿಗೆ ಮಾತ್ರ ಅವಕಾಶ ಇದೆ. ಮಾರ್ಚ್ 13ರಂದು ಈ ಔತಣ ನಡೆಯಲಿದ್ದು, ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಹಣ ಸಂಗ್ರಹ ಮಾಡುವುದು ಇದರ ಉದ್ದೇಶವಾಗಿದೆ. 1.20 ಲಕ್ಷ ಮಕ್ಕಳಿಗೆ ಒಂದು ದಿನದ ಆಹಾರ ಒದಗಿಸಲು ಈ ಹಣ ಬಳಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.