ADVERTISEMENT

‍ಪಾಕಿಸ್ತಾನ: 12 ಸಂಸದರು ಶತ ಕೋಟ್ಯಧಿಪತಿಗಳು!

ಪಿಟಿಐ
Published 11 ನವೆಂಬರ್ 2020, 12:32 IST
Last Updated 11 ನವೆಂಬರ್ 2020, 12:32 IST

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್‌ನಲ್ಲಿ 12 ಸಂಸದರು ಶತಕೋಟ್ಯಧಿಪತಿಗಳಿದ್ದಾರೆ ಎಂದು ಬುಧವಾರ ‘ಡಾನ್ ನ್ಯೂಸ್‌’ ವರದಿ ಮಾಡಿದೆ.

ವಿವಿಧ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ಶ್ರೀಮಂತರಾಗಿದ್ದು, ದೇಶ ಮತ್ತು ವಿದೇಶಗಳಲ್ಲಿ ದೊಡ್ಡಮಟ್ಟಲ್ಲಿ ಆಸ್ತಿ ಹೊಂದಿದ್ದಾರೆ. ಹಲವರು ಷೇರು ಮಾರುಕಟ್ಟೆಯಲ್ಲೂ ಅಪಾರ ಹೂಡಿಕೆ ಮಾಡಿದ್ದಾರೆ.

ಶತಕೋಟ್ಯಧಿಪತಿಗಳಲ್ಲಿ ಐವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷಕ್ಕೆ ಸೇರಿದವರು. ಉಳಿದವರು ವಿವಿಧ ಪಕ್ಷಗಳಿಗೆ ಸೇರಿದವರಿದ್ದಾರೆ.

ADVERTISEMENT

ಕುತೂಹಲದ ಸಂಗತಿಯೆಂದರೆ ಪ್ರಧಾನಿ ಇಮ್ರಾನ್, ಮಾಜಿ ಪ್ರಧಾನಿ ಶಾಹಿದ್ ಅಬ್ಬಾಸಿ ಸೇರಿದಂತೆ ಇತರ ರಾಜಕೀಯ ಮುಖಂಡರು ಕಳೆದ ವರ್ಷ ₹ 100 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರು. ಆದರೆ, ಈ ವರ್ಷ ಅವರ ಆಸ್ತಿಯ ಮೌಲ್ಯದಲ್ಲಿ ಕುಸಿತವುಂಟಾಗಿದೆ.

ಪಾಕಿಸ್ತಾನ ಸಂಸತ್ತಿನ 342 ಜನಪ್ರತಿನಿಧಿಗಳಲ್ಲಿ ಬಹುತೇಕರು ಭೂಮಾಲೀಕರು ಇಲ್ಲವೇ ಬಂಡವಾಳಶಾಹಿಗಳಿದ್ದಾರೆ. ಬಹುಪಾಲು ಸದಸ್ಯರು ಬೃಹತ್ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದು, ಹಲವರು ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು 2019ರಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಜನಪ್ರತಿನಿಧಿಗಳು ಸಲ್ಲಿಸಿದ್ದ ಆಸ್ತಿ ವಿವರದ ಮಾಹಿತಿಯಲ್ಲಿ ಬಹಿರಂಗವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.