ADVERTISEMENT

ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್‌ನ 12 ಜನ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2023, 4:04 IST
Last Updated 15 ಜನವರಿ 2023, 4:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೀವ್‌: ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಉಕ್ರೇನ್‌ನ ಡಿನಿಪ್ರೊ ನಗರದ ವಸತಿ ಸಮುಚ್ಚಯವೊಂದರ 12 ಜನರು ಮೃತಪಟ್ಟಿದ್ದಾರೆ.

ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 6 ಮಕ್ಕಳು ಸೇರಿವೆ ಎಂದು ಸ್ಥಳೀಯ ಗವರ್ನರ್‌ ವಾಲೆಂಟೈನ್‌ ರೆಝ್ನಿಚೆಂಕೊ ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಉಕ್ರೇನ್‌ ಹೇಳಿದೆ.

ADVERTISEMENT

ಕಳೆದ ಮೂರು ತಿಂಗಳಿಂದ ರಷ್ಯಾ ದಾಳಿ ಮಾಡುತ್ತಲೇ ಇದೆ. ರಷ್ಯಾ ಕಳೆದೊಂದು ವಾರದಿಂದ ಉಕ್ರೇನ್‌ನ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಯನ್ನು ತೀವ್ರಗೊಳಿಸಿದೆ.

ನಿಪ್ರೊವ್‌ಸ್ಕೀ, ಹೊಲೊಸೀವ್‌ಸ್ಕೀ, ಡಿನಿಪ್ರೊ ಪ್ರದೇಶಗಳ ಮೇಲೆ ರಷ್ಯಾ ವಾಯು ದಾಳಿಯನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಜನರು ಆಶ್ರಯ ತಾಣಗಳಲ್ಲಿ ಉಳಿಯುವಂತೆ ನಗರದ ನಿವಾಸಿಗಳಿಗೆ ಕೀವ್‌ ಮೇಯರ್‌ ವಿತಾಲಿ ಕ್ಲಿಸ್‌ಚ್ಕೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.