ADVERTISEMENT

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ : 133ಕ್ಕೇರಿದ ಸಾವಿನ ಸಂಖ್ಯೆ 

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 2:40 IST
Last Updated 14 ಜುಲೈ 2018, 2:40 IST
ಪಾಕ್ ಬಾಂಬ್ ಸ್ಫೋಟ
ಪಾಕ್ ಬಾಂಬ್ ಸ್ಫೋಟ   

ಕ್ವೆಟ್ಟಾ, ಪಾಕಿಸ್ತಾನ: ಪಾಕಿಸ್ತಾನದಲ್ಲಿ ಎರಡು ಕಡೆ ಚುನಾವಣಾ ರ‍್ಯಾಲಿಗಳ ಮೇಲೆ ಶುಕ್ರವಾರ ಆತ್ಮಾಹುತಿಬಾಂಬ್‌ ದಾಳಿ ನಡೆದಿದ್ದು, ಸಾವಿನ ಸಂಖ್ಯೆ 133ಕ್ಕೇರಿದೆ.

ದಾಳಿಗಳಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು 20 ಜನರ ಸ್ಥಿತಿ ಗಂಭೀರವಾಗಿದೆ ಎಂದು ಬಲೂಚಿಸ್ತಾನದ ಆರೋಗ್ಯ ಸಚಿವ ಫಯಾಜ್‌ ಕಾಕರ್‌ ತಿಳಿಸಿದ್ದಾರೆ.ಈ ತಿಂಗಳ 25ರಂದು ಇಲ್ಲಿ ಚುನಾವಣೆ ನಡೆಯಲಿದೆ.

ಮಸ್ತುಂಗ ಪ್ರದೇಶದಲ್ಲಿ ಬಲೂಚಿಸ್ತಾನ ಅವಾಮಿ ಪಾರ್ಟಿಯ (ಬಿಎಪಿ) ನಾಯಕ ಸಿರಾಜ್‌ ರೈಸಾನಿ ಅವರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ. ಗಾಯಗೊಂಡ ರೈಸಾನಿ ಅವರು ಕ್ವೆಟ್ಟಾಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮತ್ತೊಂದು ದಾಳಿಯು ಬನ್ನು ಪ್ರದೇಶದಲ್ಲಿ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.