ADVERTISEMENT

ಕರಾಚಿ: ಹೋಳಿ ಸಂಭ್ರಮದಲ್ಲಿದ್ದವಿದ್ಯಾರ್ಥಿಗಳ ಮೇಲೆ ಹಲ್ಲೆ

ಪಿಟಿಐ
Published 7 ಮಾರ್ಚ್ 2023, 15:26 IST
Last Updated 7 ಮಾರ್ಚ್ 2023, 15:26 IST
   

ಕರಾಚಿ (ಪಿಟಿಐ): ಕರಾಚಿ ವಿಶ್ವವಿದ್ಯಾಲಯದಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಹಿಂದೂ ವಿದ್ಯಾರ್ಥಿಗಳ ಮೇಲೆ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯವರು ಹಲ್ಲೆ ಮಾಡಿದ್ದು, 15 ಮಂದಿ ಗಾಯಗೊಂಡಿದ್ದಾರೆ.

ಎರಡು ದಿನಗಳಲ್ಲಿ ವರದಿಯಾದ ಎರಡನೇ ಪ್ರಕರಣವಿದು. ಅಧಿಕಾರಿಗಳ ಪ್ರಕಾರ, ಸಿಂಧಿ ವಿಭಾಗದಲ್ಲಿ ಹಿಂದೂ ಮತ್ತು ಇತರೆ ವಿದ್ಯಾರ್ಥಿಗಳು ಬಣ್ಣ ಎರಚಿ ಸಂಭ್ರಮಿಸುತ್ತಿದ್ದಾಗ, ಕೆಲವರು ಹಲ್ಲೆ ನಡೆಸಿದ್ದಾರೆ.

‘ಹಲ್ಲೆ ಪ್ರಕರಣ ವಿಶ್ವವಿದ್ಯಾಲಯದ ನೀತಿಗೆ ವಿರುದ್ಧವಾದುದು. ಪ್ರಕರಣದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬರು ಈ ಸಂಬಂಧಿತ ವಿಡಿಯೊ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಇಸ್ಲಾಮಿ ಜಮಾಯಿತ್‌ ಟುಲ್ಬಾ (ಐಜೆಟಿ) ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಪಂಜಾಬ್‌ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲೂ ಸೋಮವಾರ ಇಂತಹದೇ ಕೃತ್ಯ ನಡೆದಿದ್ದು, ಅಲ್ಲಿಯೂ ಸುಮಾರು 15 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.