ADVERTISEMENT

ಪಾಕಿಸ್ತಾನದಲ್ಲಿ ಕಮರಿಗೆ ಬಿದ್ದ ಬಸ್‌: 15 ಮಂದಿ ಸಾವು

ಪಿಟಿಐ
Published 4 ಮೇ 2021, 9:14 IST
Last Updated 4 ಮೇ 2021, 9:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ‘ಪಾಕಿಸ್ತಾನದ ಪಂಜಾಬ್‌ನಲ್ಲಿ ಬಸ್ಸೊಂದು ಕಮರಿಗೆ ಬಿದ್ದು 15 ಮಂದಿ ಮೃತಪಟ್ಟಿದ್ದಾರೆ. 35 ಮಂದಿಗೆ ಗಾಯಗಳಾಗಿವೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

‘ಬಸ್‌ ಲಾಹೋರ್‌ನಿಂದ ಮರ್ದಾನ್‌ನತ್ತ ಚಲಿಸುತ್ತಿತ್ತು. ಈ ವೇಳೆ ಕಾರಿನೊಂದಿಗೆ ಅಪಘಾತ ತಪ್ಪಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬಸ್‌ ಕಮರಿಗೆ ಬಿದ್ದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT