ADVERTISEMENT

16 ಭಾರತೀಯರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿ ನೆಲೆಸುವ ಸಲುವಾಗಿ ನಕಲಿ ದಾಖಲೆಗಳನ್ನು ನೀಡಿ ವಿವಾಹ ನೋಂದಣಿ ಮಾಡಿಸಿದ್ದ ಆಪಾದನೆಯ ಮೇಲೆ ಪಂಜಾಬ್ ಮೂಲದ ಭಾಂಗ್ರಾ ಗಾಯಕ ಸೇರಿದಂತೆ 16 ಭಾರತೀಯರನ್ನು ಇಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಾದ ಭಾಂಗ್ರಾ ಶೈಲಿಯ ಉದಯೋನ್ಮುಖ ಯುವ ಗಾಯಕ ಗ್ಯಾರಿ ಸಂಧು ಅವರಿಗೆ ಬ್ರಿಟನ್‌ನಲ್ಲಿ ನೆಲೆಸಲು ಅನುಮತಿ ಇಲ್ಲದ ಕಾರಣ ವಾಪಸು ಭಾರತಕ್ಕೆ ಕಳುಹಿಸಲಾಗಿದೆ. ಇತ್ತೀಚಿಗೆ ವಲಸೆ ಅಧಿಕಾರಿಗಳು ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಹಚ್ಚಲು ನಡೆಸಿದ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.