ಪಿಟಿಐ
ಲಂಡನ್: ಬ್ರಿಟನ್ ಮೂಲದ ಟಿ4 ಎಜುಕೇಷನ್ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಎಚ್‌ಪಿ’ ಸಂಯುಕ್ತವಾಗಿ ಆಯೋಜಿಸಿರುವ ‘ಏಷ್ಯಾ ಎಜುಕೇಷನ್ ಮೆಡಲ್’ ಸ್ಪರ್ಧೆಯ ಅಂತಿಮ ಸುತ್ತಿಗೆ ಭಾರತದ ಆಶೀಶ್ ಧವನ್ ಹಾಗೂ ಪ್ರಣವ್ ಕೊಠಾರಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಸ್ಪರ್ಧೆ ಏರ್ಪಡಿಸಲಾಗಿದೆ.
ಆಶೀಶ್ ಧವನ್ ಅವರು ಸೆಂಟ್ರಲ್ ಸ್ಕ್ವೇರ್ ಫೌಂಡೇಷನ್‌ನ ಸಂಸ್ಥಾಪಕರು ಮತ್ತು ಮುಖ್ಯಸ್ಥರು. ಪ್ರಣವ್ ಅವರು ಎಜುಕೇಷನ್ ಇನಿಷಿಯೇಟಿವ್ಸ್ ಸಂಸ್ಥೆಯ ಸಿಇಒ. ಇವರು ಸಿಂಗಪುರ, ಫಿಲಿಪ್ಪೀನ್ಸ್, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್ ಮತ್ತು ಮಲೇಷ್ಯಾ ದೇಶಗಳ 8 ಮಂದಿ ಸಾಧಕರೊಂದಿಗೆ ಅಕ್ಟೋಬರ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.