ADVERTISEMENT

2016ನೇ ಸಾಲಿನ ನೊಬೆಲ್ ಪ್ರಕಟ

ಏಜೆನ್ಸೀಸ್
Published 3 ಅಕ್ಟೋಬರ್ 2016, 11:11 IST
Last Updated 3 ಅಕ್ಟೋಬರ್ 2016, 11:11 IST
2016ನೇ ಸಾಲಿನ ನೊಬೆಲ್ ಪ್ರಕಟ
2016ನೇ ಸಾಲಿನ ನೊಬೆಲ್ ಪ್ರಕಟ   

2016ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜಪಾನಿನ ಒಶಿನೋರಿ ಓಹ್ಸುಮಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದೇಹ ರಚನಾ ಪದಾರ್ಥಗಳು ಜೀರ್ಣಿಸುವ ಪ್ರಕ್ರಿಯೆ(ಆಟೋಫಗಿ) ವಿಧಾನದ ಕುರಿತಾಗಿ ನಡೆಸಲಾಗಿರುವ ಸಂಶೋಧನೆಗೆ ಪ್ರಶಸ್ತಿ ಸಂದಿದೆ.

ಏನೀದು 'ಆಟೋಫಗಿ'
ಸ್ವಯಂಭಕ್ಷಣ ಎಂಬುದು ಆಟೋಫಗಿ ಪದದ ನೇರ ಅರ್ಥ. ಜೀವಕೋಶಗಳು ತಮ್ಮಲ್ಲಿನ ಅಂಶಗಳನ್ನು ಮರುಬಳಕೆ ಮಾಡುವ ಪ್ರಕ್ರಿಯೆ ಇದಾಗಿದೆ. ಕೋಶ ಒಳಗಿನ ಪದಾರ್ಥಗಳನ್ನು ಪದರದೊಳಗೆ ಸೇರಿಸಿ, ಅದನ್ನು ಕೋಶದೊಳಗಿನ ಮರುಬಳಕೆ ಕೇಂದ್ರಕ್ಕೆ ರವಾನಿಸುತ್ತದೆ ಎಂಬುದನ್ನು 1960ರಲ್ಲಿಯೇ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ರೀತಿಯ ಆಟೋಫಗಿ ಪ್ರಕ್ರಿಯೆ ನಿಯಂತ್ರಿಸಲು ಕಾರಣವಾಗಿರುವ ವಂಶವಾಹಿಗಳ ವರ್ಗವನ್ನು ವಿಜ್ಞಾನಿ ಒಶಿನೋರಿ ಪತ್ತೆ ಮಾಡಿದ್ದಾರೆ. ಈಸ್ಟ್ನಲ್ಲಿ ಇದರ ಪ್ರಕ್ರಿಯೆ ಗಮನಿಸಿ, ನಂತರ ಮನುಷ್ಯರ ಜೀವಕೋಶಗಳಲ್ಲಿ ಆಗುವ ಪ್ರಕ್ರಿಯಾ ಸೂತ್ರವನ್ನು ವಿವರಿಸಿದ್ದಾರೆ.

ADVERTISEMENT

ಪರಿಚಯ
ಹೆಸರು: ಒಶಿನೋರಿ ಓಹ್ಸುಮಿ
ಜನನ: 1945, ಫೊಕೋಕಾ, ಜಪಾನ್
ಸಂಶೋಧನೆ: ಆಟೋಫಗಿ ಪ್ರಕ್ರಿಯಾ ವಿಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.