ADVERTISEMENT

2024ಕ್ಕೆ ವಿಶ್ವದ ಅತ್ಯಂತ ಜನಬಾಹುಳ್ಯ ರಾಷ್ಟ್ರವಾಗಲಿದೆ ಭಾರತ: ವಿಶ್ವಸಂಸ್ಥೆ ವರದಿ

ಏಜೆನ್ಸೀಸ್
Published 22 ಜೂನ್ 2017, 11:29 IST
Last Updated 22 ಜೂನ್ 2017, 11:29 IST
2024ಕ್ಕೆ ವಿಶ್ವದ ಅತ್ಯಂತ ಜನಬಾಹುಳ್ಯ ರಾಷ್ಟ್ರವಾಗಲಿದೆ ಭಾರತ: ವಿಶ್ವಸಂಸ್ಥೆ ವರದಿ
2024ಕ್ಕೆ ವಿಶ್ವದ ಅತ್ಯಂತ ಜನಬಾಹುಳ್ಯ ರಾಷ್ಟ್ರವಾಗಲಿದೆ ಭಾರತ: ವಿಶ್ವಸಂಸ್ಥೆ ವರದಿ   

ವಿಶ್ವಸಂಸ್ಥೆ: ಭಾರತದ ಜನಸಂಖ್ಯೆ ಮುಂದಿನ ಏಳು ವರ್ಷಗಲ್ಲಿ 144 ಕೋಟಿ ದಾಟುವ ಮೂಲಕ ಚೀನಾಗಿಂತಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

2017ರ ವಿಶ್ವ ಜನಸಂಖ್ಯಾ ಹೊರನೋಟ ಪರಿಷ್ಕೃತ  ವರದಿ ಬುಧವಾರ ಬಿಡುಗಡೆಯಾಗಿದೆ. ಇದರ ಪ್ರಕಾರ, ಕಳೆದ 40 ವರ್ಷಗಳಲ್ಲಿ ಭಾರತೀಯರ ಜನನ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

ಪ್ರಸ್ತುತ ಜನನ ಪ್ರಮಾಣ 2.3ರಷ್ಟಿದೆ ಹಾಗೂ ಕಳೆದ 25 ವರ್ಷಗಳಲ್ಲಿ ಜೀವಿತಾವಧಿ ಹತ್ತು ವರ್ಷಗಳಷ್ಟು ಸೇರ್ಪಡೆಯಾಗಿದ್ದು, 69 ವರ್ಷಕ್ಕೆ ಸಮೀಪಿಸಿದೆ.

ADVERTISEMENT

134 ಕೋಟಿ ಇರುವ ಭಾರತದ ಜನಸಂಖ್ಯೆ 2024ರ ವೇಳೆಗೆ  144 ಕೋಟಿ ಮುಟ್ಟಲಿದೆ. ಪ್ರಸ್ತುತ 141 ಕೋಟಿ ಇರುವ ಚೀನಾದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಭಾರತದ ಜನಸಂಖ್ಯೆ ಹೆಚ್ಚಲಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 166 ಕೋಟಿಯಾಗುವುದಾಗಿ ನಿರೀಕ್ಷಿಸಲಾಗಿದೆ.

ವಿಶ್ವ ಜನಸಂಖ್ಯೆ 760 ಕೋಟಿಯಿದ್ದು, 2030ಕ್ಕೆ 860 ಕೋಟಿ ದಾಟಲಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.