ADVERTISEMENT

ಸಲಿಂಗ ಮದುವೆ ಕಾನೂನು ಬದ್ಧ ಅಲ್ಲ: ಚೀನಾ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:15 IST
Last Updated 21 ಆಗಸ್ಟ್ 2019, 20:15 IST
   

ಬೀಜಿಂಗ್‌ : ಚೀನಾ ಕಾನೂನು, ಮದುವೆಯ ಸಂಬಂಧವನ್ನು ಹೆಣ್ಣು– ಗಂಡಿನ ಬಂಧಕ್ಕೇ ಮಿತಿಗೊಳಿಸುತ್ತದೆ ಎಂದು ಸಂಸತ್ತಿನ ವಕ್ತಾರ ಬುಧವಾರ ಸ್ಪಷ್ಟಪಡಿಸಿದರು.

ಚೀನಾ ಕೂಡ ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಂಸತ್ತಿನ ವಕ್ತಾರ ಜಾಂಗ್‌ ಪ್ರತಿಕ್ರಿಯಿಸಿ, ‘ಸಲಿಂಗ ಮದುವೆ ಪರಿಕಲ್ಪನೆ ನಮ್ಮ ದೇಶದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಕ್ಕೆ ಒಪ್ಪುವುದಿಲ್ಲ. ನನಗೆ ಗೊತ್ತಿರುವ ಹಾಗೆ, ಜಗತ್ತಿನ ಹಲವು ದೇಶಗಳು ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸಿಲ್ಲ’ ಎಂದರು.

ನೆರೆಯ ತೈವಾನ್‌ನಲ್ಲಿ ಇರುವಂತೆ ಸಲಿಂಗಿ ಮದುವೆಗೆ ಚೀನಾದಲ್ಲೂ ಅವಕಾಶ ನೀಡಬೇಕು ಎನ್ನುವ ಹೋರಾಟಗಾರರ ಒತ್ತಡದ ನಡುವೆಯೂ ಈ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

ತೈವಾನ್‌ ಸಂಸತ್ತು ಮೇ ತಿಂಗಳಲ್ಲಿ ಸಲಿಂಗ ಮದುವೆಯನ್ನು ಕಾನೂನುಬದ್ಧ ಎಂದು ಹೇಳಿತ್ತು.

‘ಜಾಂಗ್‌ ಅವರ ಹೇಳಿಕೆಯಿಂದ ನಿರಾಶೆಯಾಗಿದೆ ಆದರೆ, ಇದು ಅನಿರೀಕ್ಷಿತವೇನಲ್ಲ’ ಎಂದು ಪ್ರಮುಖ ಸಲಿಂಗಿ ಹಕ್ಕುಗಳ ಹೋರಾಟಗಾರ ಸನ್‌ ವೆನ್‌ಲೈ ಅವರು ಹೇಳಿದರು.

‘ದೇಶದ ಕಾನೂನು ವ್ಯವಸ್ಥೆಗೆ ನಾನು ಮತ್ತು ನನ್ನ ಸಂಗಾತಿ ನಮ್ಮ ಸಂತೋಷವನ್ನು ತ್ಯಾಗ ಮಾಡುತ್ತಿದ್ದೇವೆ ಎನಿಸುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಜ.ಬಾಜ್ವಾ ಸೇವಾವಧಿ ವಿಸ್ತರಣೆಗೆ ಚೀನಾ ಸ್ವಾಗತ

ಬೀಜಿಂಗ್ : ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರ ಸೇವಾವಧಿ ವಿಸ್ತರಿಸಿದ್ದನ್ನು ಚೀನಾ ಸ್ವಾಗತಿಸಿದೆ.

ಬಾಜ್ವಾ ಅವರನ್ನು ಚೀನಾದ ‘ಹಳೆಯ ಸ್ನೇಹಿತ’ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೆಂಗ್ ಶ್ವಾಂಗ್ ಅವರು, ‘ದ್ವಿಪಕ್ಷೀಯ ಬಾಂಧವ್ಯಕ್ಕೆ ಬಾಜ್ವಾ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.