ADVERTISEMENT

ಮುಂಬೈ ದಾಳಿ ಪ್ರಕರಣ: 24ರಂದು ರಾಣಾ ಹಸ್ತಾಂತರ ಅರ್ಜಿ ವಿಚಾರಣೆ

ಪಿಟಿಐ
Published 22 ಜೂನ್ 2021, 14:21 IST
Last Updated 22 ಜೂನ್ 2021, 14:21 IST
court
court   

ವಾಷಿಂಗ್ಟನ್‌: 2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ವುರ್‌ ರಾಣಾ ಹಸ್ತಾಂತರ ಕೋರಿದ ಅರ್ಜಿಯ ಭೌತಿಕ ವಿಚಾರಣೆಯನ್ನು ಅಮೆರಿಕದ ಕೋರ್ಟ್‌ ಜೂ. 24ರಂದು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಲಾಸ್‌ ಏಂಜಲೀಸ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಈ ಕಲಾಪದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತದ ಅಧಿಕಾರಿಗಳ ತಂಡ ಇಲ್ಲಿಗೆ ಬಂದಿಳಿದಿದೆ ಎಂದು ಇವೇ ಮೂಲಗಳು ಹೇಳಿವೆ.

ಮುಂಬೈ ಮೇಲೆ ನಡೆದ ದಾಳಿ ಪ್ರಕರಣದ ಪ್ರಮುಖ ಆರೋಪಿ ಡೇವಿಡ್‌ ಕೋಲ್‌ಮನ್‌ ಹೆಡ್ಲಿಯ ಬಾಲ್ಯ ಸ್ನೇಹಿತನಾದ ರಾಣಾ ಕೂಡ ಈ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಇದೆ. ಈ ಕಾರಣಕ್ಕಾಗಿ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ.

ADVERTISEMENT

ಈ ಭಯೋತ್ಪಾದಕ ದಾಳಿ ಘಟನೆಯಲ್ಲಿ 6 ಜನ ಅಮೆರಿಕನ್ನರು ಸೇರಿ ಒಟ್ಟು 166 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.