ADVERTISEMENT

ಪ್ರವಾಹ: 28 ಮಂದಿ ಸಾವು

ಪಿಟಿಐ
Published 16 ಜುಲೈ 2019, 17:38 IST
Last Updated 16 ಜುಲೈ 2019, 17:38 IST
ಪ್ರವಾಹದಿಂದ ಜಖಂಗೊಂಡ ಮನೆಯ ಅವಶೇಷಗಳ ಮೇಲೆ ಕುಳಿತಿರುವ ಮಗು –ಎಎಫ್‌ಪಿ ಚಿತ್ರ
ಪ್ರವಾಹದಿಂದ ಜಖಂಗೊಂಡ ಮನೆಯ ಅವಶೇಷಗಳ ಮೇಲೆ ಕುಳಿತಿರುವ ಮಗು –ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್: ಪ್ರವಾಹದಿಂದಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ನೇಲೂಂ ಕಾಲುವೆ ಒಡೆದ ಪರಿಣಾಮ 28 ಜನರು ಸಾವನ್ನಪ್ಪಿದ್ದು, ಮಸೀದಿ ಹಾಗೂ ಹಲವು ಮನೆಗಳು ಕೊಚ್ಚಿಹೋಗಿವೆ.

ಲಾಸ್ವಾ ಪ್ರದೇಶದಲ್ಲಿದ್ದ 150 ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಇಲ್ಲಿ 12ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎಕ್ಸ್‌ಪ್ರೆಸ್‌ ಟ್ರಿಬೂನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. 52 ಜನರನ್ನು ಹೆಲಿಕಾಪ್ಟರ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಪಾಕಿಸ್ತಾನ ಸೇನಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT