ADVERTISEMENT

ಅಮೆರಿಕದ ವಿಸ್ಕಾನ್ಸಿನ್‌: ಹೋಟೆಲ್‌ನಲ್ಲಿ ಗುಂಡಿನ ದಾಳಿ, ಮೂವರು ಸಾವು

ಏಜೆನ್ಸೀಸ್
Published 18 ಏಪ್ರಿಲ್ 2021, 12:22 IST
Last Updated 18 ಏಪ್ರಿಲ್ 2021, 12:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೆನೋಶಾ, ಅಮೆರಿಕ: ವಿಸ್ಕಾನ್ಸಿನ್‌ ರಾಜ್ಯದ ಸೋಮರ್ಸ್‌ ಗ್ರಾಮದಲ್ಲಿನ ಹೋಟೆಲ್‌ವೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

‘ಗುಂಡಿನ ದಾಳಿ ನಡೆಸಿರುವ ಶಂಕಿತ ವ್ಯಕ್ತಿಯನ್ನು ಇನ್ನೂ ಬಂಧಿಸಿಲ್ಲ. ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಶಂಕೆ ಇದೆ. ಈ ಘಟನೆಯಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಇಲ್ಲ’ ಎಂದು ಕೆನೋಶಾ ಕೌಂಟಿಯ ಸಾರ್ಜೆಂಟ್‌ ಡೇವಿಡ್‌ ರೈಟ್‌ ತಿಳಿಸಿದರು.

‘ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ರೈಟ್‌ ತಿಳಿಸಿದರು.

ADVERTISEMENT

ಈ ಘಟನೆಯ ಬೆನ್ನಲ್ಲೇ, ಹೋಟೆಲ್‌ಗೆ ಸಂಪರ್ಕಿಸುವ ರಸ್ತೆಯನ್ನು ಪೊಲೀಸರು ಬಂದ್‌ ಮಾಡಿದ್ದಾರೆ.

ಕಳೆದ ತಿಂಗಳಿನಿಂದ ಈವರೆಗೆ ದೇಶದ ವಿವಿಧ ಭಾಗಗಳಲ್ಲಿ ಇಂಥ ಘಟನೆಗಳು ನಡೆಯುತ್ತಿದ್ದು, ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಗುರುವಾರವಷ್ಟೇ, ಇಂಡಿಯಾನಾಪೊಲಿಸ್‌ನಲ್ಲಿ ಫೆಡ್‌ಎಕ್ಸ್‌ ಕಂಪನಿಗೆ ಸೇರಿದ ಉಗ್ರಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದರು.

ಕಳೆದ ತಿಂಗಳು ಅಟ್ಲಾಂಟಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಜನ, ಕೊಲೊರಾಡೊದಲ್ಲಿ 10 ಜನರು ಮೃತಪಟ್ಟಿದರು. ಕ್ಯಾಲಿಫೋರ್ನಿಯಾದ ಕಚೇರಿಯೊಂದರಲ್ಲಿ ಕಳೆದ ತಿಂಗಳು ನಡೆದ ಇಂಥದೇ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.