ADVERTISEMENT

ಕೆನಡಾ: ಮಾನವ ಕಳ್ಳ ಸಾಗಣೆ; ಭಾರತೀಯ ಮೂಲದ ಮೂವರ ಬಂಧನ

ಪಿಟಿಐ
Published 26 ಆಗಸ್ಟ್ 2021, 10:14 IST
Last Updated 26 ಆಗಸ್ಟ್ 2021, 10:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೊರಂಟೊ: ‘ಕೆನಡಾದಲ್ಲಿ ಮಾನವ ಕಳ್ಳ ಸಾಗಣೆ ಪ್ರಕರಣದಡಿ ಮೂವರು ಭಾರತೀಯ ಮೂಲದ ವ್ಯಕ್ತಿಗಳನ್ನು ಬಂಧಿಸಲಾಗಿದೆ’ ಎಂದು ಟೊರಂಟೊ ಸ್ಟಾರ್‌ ‍ಪತ್ರಿಕೆಯು ಬುಧವಾರ ವರದಿ ಮಾಡಿದೆ.

18 ವರ್ಷದೊಳಗಿನ ಬಾಲಕಿಯ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಡಿ ಒಂಟಾರಿಯೊದ ಬ್ರಾಂಪ್ಟನ್ ನಗರದಲ್ಲಿ ಮೂವರನ್ನು ಬಂಧಿಸಲಾಗಿದೆ. ದಕ್ಷಿಣ ಏಷ್ಯಾ ಮೂಲದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

ಬಂಧಿತರನ್ನು ಅಮೃತಪಾಲ್‌ ಸಿಂಗ್‌, ಹರ್ಕುವರ್ ಸಿಂಗ್ ಮತ್ತು ಸುಖ್ಮನ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.

ADVERTISEMENT

ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಗಂಭೀರ ಗಾಯಗಳಾಗಿವೆ ಎಂದು ವರದಿ ಹೇಳಿದೆ.

ಆಗಸ್ಟ್‌ 22ರಂದು ಒಂಟಾರಿಯೊ ನ್ಯಾಯಾಲಯದಲ್ಲಿ ಎಲ್ಲಾ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.