ADVERTISEMENT

ಅಮೆರಿಕ: ಅಕ್ರಮ ಪ್ರವೇಶ, ಮೂವರು ಭಾರತೀಯರ ಬಂಧನ

ಪಿಟಿಐ
Published 4 ಡಿಸೆಂಬರ್ 2021, 11:06 IST
Last Updated 4 ಡಿಸೆಂಬರ್ 2021, 11:06 IST
.
.   

ವಾಷಿಂಗ್ಟನ್‌: ಈ ಹಿಂದೆ ಭಾರತಕ್ಕೆ ಗಡಿಪಾರು ಮಾಡಲಾಗಿದ್ದ ಮೂವರು ಭಾರತೀಯ ಪ್ರಜೆಗಳು ಮತ್ತೆ ಅಮೆರಿಕ ಪ್ರವೇಶಿಸಿದ್ದರಿಂದ ಅವರನ್ನು ವರ್ಜಿನ್‌ ಐಲ್ಯಾಂಡ್ ಬಳಿ ಬಂಧಿಸಲಾಗಿದೆ ಎಂದು ಅಮೆರಿಕದ ವಕೀಲರು ತಿಳಿಸಿದ್ದಾರೆ.

ಫ್ಲಾರಿಡಾದಲಾಡರ್‌ಡೆಲ್‌ಗೆ ತೆರಳುವ ಸಲುವಾಗಿ ವಿಮಾನವೇರಲು ಹೊರಟಿದ್ನದ ಕೃಷ್ಣಾಬೆನ್ ಪಟೇಲ್ (25), ನಿಕುಂಜ್‌ಕುಮಾರ್ ಪಟೇಲ್ (27) ಮತ್ತು ಅಶೋಕ್‌ಕುಮಾರ್‌ ಪಟೇಲ್ (39) ಅವರನ್ನು ಸೇಂಟ್‌ ಕ್ರೋಕ್ಸ್ ವಿಮಾನ ನಿಲ್ದಾಣದಲ್ಲಿ ನವೆಂಬರ್‌ 24ರಂದು ಬಂಧಿಸಲಾಗಿದೆ. ತಪ್ಪಿತಸ್ಥರು ಎಂಬ ತೀರ್ಪು ಬಂದರೆ ಅವರು 10 ವರ್ಷಗಳ ಜೈಲುಶಿಕ್ಷೆ ಮತ್ತು ನಂತರದ ಗಡಿಪಾರು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT