ADVERTISEMENT

ಉಗ್ರ ಸಂಘಟನೆ ಸೇರಿಲ್ಲ; ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ: ಸ್ಪಷ್ಟನೆ

ಪಿಟಿಐ
Published 30 ಸೆಪ್ಟೆಂಬರ್ 2019, 20:15 IST
Last Updated 30 ಸೆಪ್ಟೆಂಬರ್ 2019, 20:15 IST
   

ದುಬೈ: ‘ನನ್ನ ಸ್ವಂತ ಇಚ್ಛೆಯಿಂದ ಅಬುಧಾಬಿಗೆ ಹೋಗಿದ್ದೇನೆ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ’ ಎಂದು ಕೇರಳದ 19 ವರ್ಷದ ಕ್ರೈಸ್ತ ಹುಡುಗಿ ಸಿಯಾನಿ ಬೆನ್ನಿ ಸ್ಪಷ್ಟಪಡಿಸಿದ್ದಾರೆ.

ಆಕೆಯನ್ನು ಅಪಹರಿಸಿ ಬಲವಂತವಾಗಿ ಉಗ್ರ ಸಂಘಟನೆಗೆ ಸೇರಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

‘ನನ್ನ ಕುರಿತು ಹಬ್ಬಿಸಲಾಗಿರುವ ಎಲ್ಲಾ ಸುದ್ದಿಗಳು ಸುಳ್ಳಿನಿಂದ ಕೂಡಿವೆ’ ಎಂದು ಬೆನ್ನಿ ಹೇಳಿರುವುದಾಗಿ ಗಲ್ಫ್‌ ನ್ಯೂಸ್‌ ವರದಿ ಮಾಡಿದೆ.

ADVERTISEMENT

‘ನಾನು ವಾಪಸು ಬರುವುದಿಲ್ಲ ಎಂದು ನನ್ನ ಪೋಷಕರಿಗೆ ತಿಳಿಸಿದ್ದೇನೆ. ಇಲ್ಲಿ ಬದುಕಬೇಕು ಎಂದರೆ ನಾನು ಮದುವೆ ಆಗಬೇಕು’ ಎಂದು ಬೆನ್ನಿ ಹೇಳಿದ್ದಾರೆ.

ಭಾರತೀಯ ಯುವಕನನ್ನು ಮದುವೆಯಾಗಲು ಬೆನ್ನಿ ಅಬುಧಾಬಿಗೆ ಹೋಗಿದ್ದಾರೆ. ಇಬ್ಬರಿಗೂ ಒಂಬತ್ತು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.