ADVERTISEMENT

4ನೇ ವಯಸ್ಸಿನಲ್ಲೇ ಮೆನ್ಸಾ ಸದಸ್ಯತ್ವ ಪಡೆದ ಭಾರತೀಯ ಸಂಜಾತೆ

ಪಿಟಿಐ
Published 30 ಜನವರಿ 2021, 12:58 IST
Last Updated 30 ಜನವರಿ 2021, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಬ್ರಿಟನ್‌ನಲ್ಲಿ ಹುಟ್ಟಿ ಬೆಳೆದ ನಾಲ್ಕು ವರ್ಷ ಸಿಖ್‌ ಸಮುದಾಯದ ಬಾಲಕಿಯೊಬ್ಬಳಿಗೆಸದಸ್ಯತ್ವ ನೀಡಲು ಹೆಚ್ಚಿನ ಬುದ್ಧಿಶಕ್ತಿ (ಐಕ್ಯೂ) ಇರುವ ಮಕ್ಕಳ ಮೆನ್ಸಾ ಸದಸ್ಯತ್ವ ಕ್ಲಬ್‌ ಒಪ್ಪಿಗೆ ನೀಡಿದೆ. ಈ ಮೂಲಕ ಬ್ರಿಟನ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಕ್ಲಬ್‌ಗೆ ಸೇರ್ಪಡೆಯಾದ ಬಾಲಕಿಯಾಗಿ ಆಕೆ ಗುರುತಿಸಿಕೊಂಡಿದ್ದಾಳೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ದಯಾಳ್‌ ಕೌರ್‌, ಸಣ್ಣ ವಯಸ್ಸಿನಲ್ಲೇ ಕಲಿಕಾ ಸಾಮರ್ಥ್ಯವನ್ನು ಪ್ರಸ್ತುತಪಡಿಸಿದ್ದಳು. ಕೇವಲ 14 ತಿಂಗಳಲ್ಲೇ ಇಂಗ್ಲಿಷ್‌ನ ಎಲ್ಲ ವರ್ಣಮಾಲೆಯನ್ನು ಕಲಿತಿದ್ದ ಕೌರ್‌, ಮೆನ್ಸಾ ಪರೀಕ್ಷೆ ಬರೆಯುವ ಆಸಕ್ತಿ ತೋರಿದ್ದಳು. ಕೋವಿಡ್‌–19 ಕಾರಣದಿಂದಾಗಿ ಪ್ರಸಕ್ತ ವರ್ಷದಲ್ಲಿ ಆನ್‌ಲೈನ್‌ ಮೂಲಕ ನಡೆದ ಪರೀಕ್ಷೆಯಲ್ಲಿ 145 ಐಕ್ಯೂ ಅಂಕ ಪಡೆದಿದ್ದಾಳೆ. ಈ ಮೂಲಕ ಬ್ರಿಟನ್‌ನ ಜನಸಂಖ್ಯೆಯಲ್ಲಿ ಅತ್ಯಂತ ಪ್ರತಿಭಾವಂತ, ಹೆಚ್ಚಿನ ಬುದ್ಧಿಶಕ್ತಿಯುಳ್ಳ ಶೇ 1 ಜನಸಂಖ್ಯೆಗೆ ಕೌರ್‌ ಸೇರ್ಪಡೆಯಾಗಿದ್ದಾಳೆ.

‘ಮೆನ್ಸಾಗೆ ದಯಾಳ್‌ ಕೌರ್‌ ಅವರನ್ನು ಸ್ವಾಗತಿಸಲು ನಾವು ಹರ್ಷಗೊಂಡಿದ್ದೇವೆ. ಇಲ್ಲಿ 2 ಸಾವಿರ ಕಿರಿಯ ಸದಸ್ಯರ ಸಮುದಾಯವನ್ನು ಆಕೆ ಸೇರಿಕೊಳ್ಳಲಿದ್ದಾಳೆ’ ಎಂದು ಬ್ರಿಟನ್‌ನ ಮೆನ್ಸಾ ಮುಖ್ಯ ಕಾರ್ಯನಿರ್ವಾಹಕ ಜಾನ್‌ ಸ್ಟೀವನೇಜ್‌ ಹೇಳಿದರು.

ADVERTISEMENT

ಕೌರ್‌ ತಂದೆ, ಸರಬ್‌ಜೀತ್‌ ಸಿಂಗ್‌ ಶಿಕ್ಷಕರಾಗಿದ್ದಾರೆ. ‘ಪ್ರತಿ ಹೆತ್ತವರಿಗೆ ತಮ್ಮ ಮಕ್ಕಳು ವಿಶೇಷವಾಗಿ ಕಾಣುತ್ತಾರೆ. ಆದರೆ ನಮ್ಮ ಮಗಳು ಲಕ್ಷದಲ್ಲಿ ಒಬ್ಬಳು ಎನ್ನುವುದಕ್ಕೆ ಇದೀಗ ನಮ್ಮ ಬಳಿ ಸಾಕ್ಷ್ಯವಿದೆ’ ಎಂದು ತಮ್ಮ ಆನಂದವನ್ನು ಸಿಂಗ್‌ ಪ್ರಕಟಿಸಿದರು. ಕೌರ್‌, ಗಗನಯಾತ್ರಿಯಾಗುವ ಕನಸು ಹೊತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.