ADVERTISEMENT

ಟ್ರಕ್‌ನಿಂದ 41 ಮಂದಿ ವಲಸಿಗರ ರಕ್ಷಣೆ

ಏಜೆನ್ಸೀಸ್
Published 4 ನವೆಂಬರ್ 2019, 19:36 IST
Last Updated 4 ನವೆಂಬರ್ 2019, 19:36 IST

ಥೆಸಲೊನಿಕಿ:ಉತ್ತರ ಗ್ರೀಸ್‌ನಲ್ಲಿ ಶಿಥಲೀಕರಣ ವ್ಯವಸ್ಥೆ ಇದ್ದ ಟ್ರಕ್‌ನಿಂದ 41 ಮಂದಿ ವಲಸಿಗರನ್ನು ಪೊಲೀಸರು ಸೋಮವಾರ ರಕ್ಷಣೆ ಮಾಡಿದ್ದಾರೆ.

‘ಅಫ್ಗಾನಿಸ್ತಾನ ಮೂಲದ ವಲಸಿಗರನ್ನು ರಕ್ಷಣೆ ಮಾಡಲಾಗಿದ್ದು, ಟ್ರಕ್‌ ಚಾಲಕನನ್ನು ಬಂಧಿಸಲಾಗಿದೆ. ವಲಸಿಗರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಇವರಲ್ಲಿ ಏಳು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪುರುಷರು ಮತ್ತು ಬಾಲಕರು ಈ ಟ್ರಕ್‌ನಲ್ಲಿದ್ದು ಶೀಘ್ರ ಅವರ ಗುರುತು ಪತ್ತೆ ಹಚ್ಚಲಾಗುವುದು‘ ಎಂದಿದ್ದಾರೆ.

ADVERTISEMENT

ಬ್ರಿಟನ್‌ನಲ್ಲಿ ಕಳೆದ ತಿಂಗಳುಶಿಥಲೀಕರಣ ವ್ಯವಸ್ಥೆ ಇದ್ದ ಟ್ರಕ್‌ನಲ್ಲಿ 39 ಮಂದಿಯ ಮೃತದೇಹ ಪತ್ತೆಯಾಗಿತ್ತು. ಅನಂತರ ಅಕ್ರಮ ವಲಸಿಗರು ಸಾಗುವ ಯೂರೋಪ್‌ ದೇಶಗಳ ಮಾರ್ಗಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.