ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಪ್ರವಾಹ, ಭೂಕುಸಿತ: ಸಾವಿನ ಸಂಖ್ಯೆ 47ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 13:03 IST
Last Updated 29 ಅಕ್ಟೋಬರ್ 2022, 13:03 IST
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ –ಎಎಫ್‌ಪಿ ಚಿತ್ರ
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ –ಎಎಫ್‌ಪಿ ಚಿತ್ರ   

ಮನಿಲಾ (ಎಪಿ): ಫಿಲಿಪ್ಪೀನ್ಸ್‌ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಂಭವಿಸುತ್ತಿರುವ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನಿಷ್ಠ 47 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಫಿಲಿಪ್ಪೀನ್ ಪ್ರಾಂತ್ಯದಲ್ಲಿ 60ಕ್ಕೂ ಹೆಚ್ಚು ಗ್ರಾಮಸ್ಥರು ಕಾಣೆಯಾಗಿದ್ದಾರೆ. ಇವರೆಲ್ಲರೂ ಭೂಕುಸಿತದಲ್ಲಿ ಹೂತುಹೋಗಿರಬಹುದು ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

‘ಗುರುವಾರ ರಾತ್ರಿಯಿಂದ ಮಗಿಂದನಾವೊ ಪ್ರಾಂತ್ಯದ ಮೂರು ಪಟ್ಟಣಗಳಲ್ಲಿ ಕನಿಷ್ಠ 42 ಮಂದಿಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಅಥವಾ ಭೂಕುಸಿತದಲ್ಲಿ ಸಿಲುಕೊಂಡಿದ್ದಾರೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು.

ಚಂಡಮಾರುತ ‘ನಲ್ಗೆ‘ಯ ಹೊಡೆತದಿಂದ ಇತರ ಐದು ಜನರು ಸಾವಿಗೀಡಾಗಿದ್ದಾರೆ. ಈ ಚಂಡಮಾರುತಮರಿನ್ಸ್ ಸುರ್‌ನ ಪೂರ್ವ ಪ್ರಾಂತ್ಯಕ್ಕೆ ಶನಿವಾರ ಮುಂಜಾನೆ ಅಪ್ಪಳಿಸಿದೆ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಂಸ್ಥೆ ತಿಳಿಸಿದೆ.

ADVERTISEMENT

‘ಇಲ್ಲಿಯವರೆಗಿನ ಚಂಡಮಾರುತದಿಂದಾಗಿ ಮಗಿಂದನಾವೊದ ಡಾಟು ಓಡಿನ್ ಸಿನ್‌ಸುತ್ ಪಟ್ಟಣದ ಬುಡಕಟ್ಟು ಹಳ್ಳಿಯಾದ ಕುಸಿಯಾಂಗ್‌ನಲ್ಲಿ ಸುಮಾರು 60 ಮಂದಿ ಭೂಕುಸಿತದಲ್ಲಿ ಸಿಲುಕಿಕೊಂಡಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ’ ಎಂದು ಮುಸ್ಲಿಂ ಸ್ವಾಯತ್ತ ಪ್ರದೇಶದ ಆಂತರಿಕ ಸಚಿವ ನಗುಯಿಬ್ ಸಿನಾರಿಂಬೊ ಹೇಳಿದರು.

‘ಸುಮಾರು 80 ಕುಟುಂಬಗಳು ವಾಸಿಸುತ್ತಿದ್ದ ಕುಸಿಯಾಂಗ್‌ನಲ್ಲಿ ರಕ್ಷಣಾ ಪ‍ಡೆಯ ಸಿಬ್ಬಂದಿ 11 ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಭಾರಿ ಉಪಕರಣಗಳು, ಸೈನ್ಯ, ಪೊಲೀಸ್ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.