ಪೇಶಾವರ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗ್ರಾಮವೊಂದರಲ್ಲಿ ಹಳೆಯ ಮಾರ್ಟರ್‌ನೊಂದಿಗೆ ಮಕ್ಕಳು ಶನಿವಾರ ಆಟವಾಡುತ್ತಿದ್ದ ವೇಳೆ, ಅದು ಸ್ಫೋಟಗೊಂಡ ಪರಿಣಾಮ ಐವರು ಮಕ್ಕಳು ಮೃತಪಟ್ಟು ಇತರ 12 ಮಂದಿ ಗಾಯಗೊಂಡಿದ್ದಾರೆ.
ಲಕ್ಕಿ ಮರ್ವಾತ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಮಕ್ಕಳ ಗುಂಪಿಗೆ ಸ್ಫೋಟಗೊಂಡಿರದ ಮಾರ್ಟರ್ ಸಿಕ್ಕಿತ್ತು. ಅದನ್ನು ಅವರು ಗ್ರಾಮಕ್ಕೆ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.