ADVERTISEMENT

ಇಂಡೊನೇಷ್ಯಾ: ಪಪುವಾ ಘರ್ಷಣೆಯಲ್ಲಿ ಐವರು ಬಂಡುಕೋರರ ಹತ್ಯೆ

ಏಜೆನ್ಸೀಸ್
Published 28 ಏಪ್ರಿಲ್ 2021, 7:05 IST
Last Updated 28 ಏಪ್ರಿಲ್ 2021, 7:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಯಪುರ(ಇಂಡೊನೇಷ್ಯಾ): ಪಪುವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರ ಗುಂಪಿನ ನಡುವೆ ಮುಂದುವರಿದ ಘರ್ಷಣೆಯಲ್ಲಿ ಇಂಡೊನೇಷ್ಯಾದ ಪೊಲೀಸ್ ಅಧಿಕಾರಿ ಮತ್ತು ಐವರು ಪಪುವಾ ಬಂಡುಕೋರರು ಹತ್ಯೆಯಾಗಿದ್ದಾರೆ.

ಈ ಬಂಡುಕೋರರು ತಿಂಗಳ ಆರಂಭದಲ್ಲಿ ಪುಂಕಾಕ್ ಜಿಲ್ಲೆಯ ಬಿಯೋಗ ಹಳ್ಳಿಯ ಕೆಲವು ಶಾಲೆಗಳಿಗೆ ಬೆಂಕಿ ಇಟ್ಟು, ಇಬ್ಬರು ಶಿಕ್ಷಕರನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದರು. ನಂತರ ಪಪುವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ನಡುವೆ ಸಂಘರ್ಷ ಆರಂಭವಾಗಿತ್ತು.

ದಾಳಿಕೋರರ ಪತ್ತೆಗಾಗಿ ಪೊಲೀಸರು, ಮಿಲಿಟರಿ ಮತ್ತು ಗುಪ್ತಚರ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ಈ ದಾಳಿಕೋರರು ಪಶ್ಚಿಮ ಪಪುವಾ ವಿಮೋಚನಾ ಸಂಘಟನೆಗೆ ಸೇರಿದ ಬಂಡುಕೋರರಾಗಿದ್ದರು ಎಂಬುದು ಸೇನೆಯ ಅಧಿಕಾರಿಗಳ ನಂಬಿಕೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.