ADVERTISEMENT

ಚೀನಾದಲ್ಲಿ ರೈಲು ಅವಘಡ : 515 ಮಂದಿಗೆ ಗಾಯ

ಹಿಮಪಾತದಿಂದಾಗಿ ಅವಘಡ

ಏಜೆನ್ಸೀಸ್
Published 15 ಡಿಸೆಂಬರ್ 2023, 12:35 IST
Last Updated 15 ಡಿಸೆಂಬರ್ 2023, 12:35 IST
   

ಬೀಜಿಂಗ್: ಭಾರಿ ಹಿಮಪಾತದಿಂದಾಗಿ ಇಲ್ಲಿ ಎರಡು ಸಬ್‌ವೇ ರೈಲುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ 515 ಜನರು ಗಾಯಗೊಂಡಿದ್ದಾರೆ. ಈ ಪೈಕಿ 102 ಜನರಿಗೆ ಮೂಳೆ ಮುರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು. 

ಗುರುವಾರ ಸಂಜೆ ಅವಘಡ ನಡೆದಿದ್ದು, ಪ್ರಯಾಣಿಕರೆಲ್ಲರನ್ನೂ ರಾತ್ರಿ 11 ಗಂಟೆ ವೇಳೆಗೆ ಸ್ಥಳಾಂತರಿಸಲಾಯಿತು. 25 ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಮತ್ತು 67 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾರೆ ಎಂದು ತಿಳಿಸಿದರು.

‘ಹಿಮಪಾತದಿಂದಾಗಿ ಹಳಿಗಳು ಜಾರುತ್ತಿವೆ. ರೈಲಿನ ಸ್ವಯಂಚಾಲಿತ ಬ್ರೇಕ್‌ ಸಹ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೀಗಿದ್ದಾಗಲೇ ಮತ್ತೊಂದು ರೈಲು ಅದೇ ಮಾರ್ಗದಲ್ಲಿ ವೇಗವಾಗಿ ಧಾವಿಸಿದ್ದರಿಂದ ಅವಘಡ ಸಂಭವಿಸಿದೆ’ ಎಂದು ನಗರದ ಸಾರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. 

ADVERTISEMENT

ಬುಧವಾರ ಭಾರಿ ಹಿಮಪಾತವಾಗಿದ್ದ ಕಾರಣ ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.