ADVERTISEMENT

ಅಧ್ಯಾತ್ಮ ಮಾರ್ಗದರ್ಶಕಿಯನ್ನು ವರಿಸಿದ ಇಮ್ರಾನ್‌ ಖಾನ್

ಏಜೆನ್ಸೀಸ್
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್: ಪಾಕಿಸ್ತಾನ್‌ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್  ಲಾಹೋರ್‌ನಲ್ಲಿ  ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕಿಯನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ಪಾಕಿಸ್ತಾನ್‌ ಡೈಲಿ ವರದಿ ಮಾಡಿದೆ. ಆದರೆ, ಅವರ ಪಕ್ಷದ ನಾಯಕರು ಈ ವರದಿಯನ್ನು ಅಲ್ಲಗಳೆದಿದ್ದಾರೆ.

ಜನವರಿ 1ರಂದು ರಾತ್ರಿ ಮದುವೆ ಮಾಡಿಕೊಳ್ಳುವ ಮೂಲಕ 2018ರ ಹೊಸ ವರ್ಷವನ್ನು ಇಮ್ರಾನ್ ಖಾನ್ ಲಾಹೋರ್‌ನಲ್ಲಿ ಸ್ವಾಗತಿಸಿದ್ದಾರೆ ಮರುದಿನ ಅಲ್ಲಿಂದಲೇ ನೇರವಾಗಿ ಇಸ್ಲಾಮಾಬಾದಿಗೆ ಭಯೋತ್ಪಾದನಾ ನಿಗ್ರಹ ಕೋರ್ಟ್‌ಗೆ ಹಾಜರಾಗಿದ್ದರು. ಅಲ್ಲಿ ಅವರಿಗೆ ಜಾಮೀನು ಸಿಕ್ಕಿತು ಎಂದು ವರದಿ ತಿಳಿಸಿದೆ.

ಪಿಟಿಐ ಕೋರ್ ಸಮಿತಿ ಸದಸ್ಯ ಮುಫ್ತಿ ಸಯೀದ್ ಮದುವೆ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್‌ ಖಾನ್‌ 1995ರ ಮೇ 16ರಂದು ಜೆಮಿಮಾ ಗೋಲ್ಡ್‌ಸ್ಮಿತ್‌ ಅವರನ್ನು ಮದುವೆಯಾಗಿದ್ದರು. 2004ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ರೆಹಂ ಖಾನ್‌ ಅವರನ್ನು ಮದುವೆಯಾಗಿದ್ದು. ಅದು ಹತ್ತೇ ತಿಂಗಳಲ್ಲಿ ಮುರಿದುಬಿದ್ದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.