ADVERTISEMENT

ಭಾರತ ಭೇಟಿ: ಮೋಷೆ ಸಂಭ್ರಮ

ಪಿಟಿಐ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಭಾರತ ಭೇಟಿ: ಮೋಷೆ ಸಂಭ್ರಮ
ಭಾರತ ಭೇಟಿ: ಮೋಷೆ ಸಂಭ್ರಮ   

ಜೆರುಸಲೇಂ : 2008ರ ಮುಂಬೈ ದಾಳಿಯಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡ ಇಸ್ರೇಲಿ ಬಾಲಕ ಮೋಷೆ ಹೋಲ್ಟ್ಸ್‌ಬರ್ಗ್ (11) ತನ್ನ ಉದ್ದೇಶಿತ ಭಾರತ ಭೇಟಿ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿದ್ದಾನೆ ಮತ್ತು ಹರ್ಷಚಿತ್ತನಾಗಿದ್ದಾನೆ. ಈ ತಿಂಗಳ ಅಂತ್ಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಮೋಷೆ ಅವರ ಜೊತೆ ಬರಲಿದ್ದಾನೆ.

ಉಗ್ರರ ದಾಳಿ ನಡೆದಾಗ ಮೋಷೆಯ ತಂದೆ–ತಾಯಿ ಮೃತಪಟ್ಟಿದ್ದರು. ಆಗ ಈತನಿಗೆ ಎರಡು ವರ್ಷವಾಗಿತ್ತು. ತಂದೆ– ತಾಯಿಯ ಮೃತದೇಹದ ಸಮೀಪ ಅಳುತ್ತಾ ನಿಂತಿದ್ದ ಮೋಷೆಯನ್ನು ದಾದಿ ಸಾಂದ್ರಾ ಸಾಮ್ಯುಯಲ್ ರಕ್ಷಿಸಿದ್ದರು. ದಾಳಿ ನಡೆದಾಗ ಸಾಂದ್ರಾ ಅವರು ಕೊಠಡಿಯೊಂದರದಲ್ಲಿ ಅಡಗಿಕೊಂಡು ಬಚಾವಾಗಿದ್ದರು.

‘ತನ್ನ ಹುಟ್ಟೂರು ಮುಂಬೈಗೆ ನಂತರ ಬರುತ್ತಿರುವ ಮೋಷೆ, ತಂದೆ ತಾಯಿಗೆ ಸಂಬಂಧಿಸಿದ ಹಲವು ಘಟನೆಗಳನ್ನು ನಮ್ಮಿಂದ ಕೇಳಿ ತಿಳಿದುಕೊಂಡಿದ್ದಾನೆ’ ಎಂದು ಮೋಷೆ ಅಜ್ಜ ರಬ್ಬಿ ಶಿಮನ್‌ ರೋಸೆನ್‌ಬರ್ಗ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.