ADVERTISEMENT

ಎಚ್‌1–ಬಿ ವೀಸಾ: ಕಠಿಣ ನಿಯಮದ ಪ್ರಸ್ತಾವನೆ ಕೈಬಿಟ್ಟ ಟ್ರಂಪ್ ಆಡಳಿತ

ಏಜೆನ್ಸೀಸ್
Published 9 ಜನವರಿ 2018, 7:26 IST
Last Updated 9 ಜನವರಿ 2018, 7:26 IST
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)   

ವಾಷಿಂಗ್ಟನ್: ಗರಿಷ್ಠ ಆರು ವರ್ಷದ ಅವಧಿ ಮುಗಿದ ಬಳಿಕ ಎಚ್‌1–ಬಿ ವೀಸಾ ಹೊಂದಿರುವವರಿಗೆ ಅಮೆರಿಕದಲ್ಲಿ ವಾಸಿಸಲು ಅನುಮತಿ ನಿರಾಕರಿಸುವ ಕಠಿಣ ನಿಯಮದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ತಿಳಿಸಿದೆ. ಇದರಿಂದ ಅಮೆರಿಕದಲ್ಲಿರುವ ಭಾರತೀಯರು ನಿರಾಳರಾಗುವಂತಾಗಿದೆ.

ಎಚ್‌1–ಬಿ ವೀಸಾ ಹೊಂದಿರುವವರನ್ನು ಅವಧಿ ಮುಗಿದ ಬಳಿಕ ಗಡಿಪಾರು ಮಾಡುವ ಪ್ರಸ್ತಾವನೆ ಇದೆ ಎಂದು ಅಮೆರಿಕ ಈ ಹಿಂದೆ ಹೇಳಿತ್ತು.

‘ಎಚ್‌1–ಬಿ ವೀಸಾದ ಗರಿಷ್ಠ ಆರು ವರ್ಷದ ಮಿತಿಯನ್ನು ವಿಸ್ತರಿಸಲು ಅವಕಾಶ ನೀಡುವ ಸೆಕ್ಷನ್ 104(c), AC-21ಕ್ಕೆ ತಿದ್ದುಪಡಿ ಮಾಡಿ ವೀಸಾ ಅವಧಿ ಮುಕ್ತಾಯವಾದ ವಿದೇಶಿಯರನ್ನು ಗಡಿಪಾರು ಮಾಡುವ ಪ್ರಸ್ತಾವನೆಯನ್ನು ಅಮೆರಿಕದ ನಾಗರಿಕ ಮತ್ತು ವಲಸೆ ಸೇವೆಗಳ ಇಲಾಖೆ ಕೈಬಿಟ್ಟಿದೆ’ ಎಂದು ಇಲಾಖೆಯ ಮಾಧ್ಯಮ ವ್ಯವಹಾರಗಳ ಮುಖ್ಯಸ್ಥ ಜೋನಾಥನ್ ವಿಥಿಂಗ್ಟನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.