ADVERTISEMENT

ಚೀನಾ ಸೇನೆ ಸಮರಾಭ್ಯಾಸ

ಪಿಟಿಐ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST

ಬೀಜಿಂಗ್‌ : ದೋಕಲಾ ಬಿಕ್ಕಟ್ಟಿನ ನಂತರ, ಚೀನಾ ಸೇನೆಯ ಎಲ್ಲ ಘಟಕಗಳು ತವರು, ಗಡಿ ಪ್ರದೇಶ ಮತ್ತು ದೇಶದ ಹೊರಭಾಗಗಳಲ್ಲಿ ಸಮರಾಭ್ಯಾಸ ಕೈಗೊಂಡಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೂಚನೆಯ ಮೇರೆಗೆ ಪೀಪಲ್ಸ್ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಸೇನೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ಸಮರಾಭ್ಯಾಸ ನಡೆಸುತ್ತಿವೆ ಎಂದು ಸೇನೆಯ ಅಧಿಕೃತ ಮಾಧ್ಯಮ ಘಟಕ ತಿಳಿಸಿದೆ. ಹಿಂದೂ ಮಹಾಸಾಗರದ ಜಿಬೌಟಿ ದ್ವೀಪದಲ್ಲೂ ಚೀನಾ ನೌಕಾದಳ ಸಮರಾಭ್ಯಾಸ ತೊಡಗಲಿದೆ ಎಂದೂ ಅದು ತಿಳಿಸಿದೆ.

ದೇಶಕ್ಕಿರುವ ಸಂಭವನೀಯ ಅಪಾಯದ ಬಗ್ಗೆಯೂ ಇದು ಎಚ್ಚರಿಕೆ ನೀಡಿದೆ.

ADVERTISEMENT

ಹಿಂದಿನ ವರ್ಷ ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ 72 ದಿನಗಳವರೆಗೆ ಉಂಟಾಗಿದ್ದ ದೋಕಲಾ ಬಿಕ್ಕಟ್ಟು ಆಗಸ್ಟ್‌ 28ರಂದು ಕೊನೆಗೊಂಡಿತ್ತು. ದೋಕಲಾದಿಂದ ಸೇನೆಯನ್ನು ಭಾರತ ಮತ್ತು ಚೀನಾ ಹಿಂದಕ್ಕೆ ಕರೆಸಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.