ADVERTISEMENT

ಭ್ರಷ್ಟಾಚಾರ ಪ‍ತ್ತೆಹಚ್ಚುವ ಕೃತಕ ಬುದ್ಧಿಮತ್ತೆ‌ ವ್ಯವಸ್ಥೆ !

ಪಿಟಿಐ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಸರ್ಕಾರದಲ್ಲಿ ನಡೆಯಬಹುದಾದ ಭ್ರಷ್ಟಾಚಾರವನ್ನು ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮಾನವನ ನರವ್ಯೂಹ ಜಾಲದಂತೆ ಅಭಿವೃದ್ಧಿಪಡಿಸಿರುವ ಕಂಪ್ಯೂಟರ್‌ ಮಾದರಿಯು, ಭ್ರಷ್ಟಾಚಾರದ ಪ್ರಕರಣಗಳು ಕಾಣಿಸಿಕೊಳ್ಳುವ ಪ್ರಾಂತ್ಯ ಹಾಗೂ ಅವರಿಗೆ ಅನುಕೂಲಕರವಾಗುವ ಪರಿಸ್ಥಿತಿಗಳನ್ನು ಮುಂಚಿತವಾಗಿ ಊಹಿಸುತ್ತವೆ. ಸ್ಪೇನ್‌ನ ವಲ್ಲಾಡೋಲಿಡ್‌ ವಿಶ್ವವಿದ್ಯಾಲಯದ ಸಂಶೋಧಕರು ಇಂತಹ ಕಂಪ್ಯೂಟರ್‌ ರೂಪಿಸಿದ್ದಾರೆ.

ಅಧ್ಯಯನ ವರದಿಯು ‘ಸೋಷಿಯಲ್‌ ಇಂಡಿಕೇಟರ್ಸ್‌ ರಿಸರ್ಚ್‌’ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.

ADVERTISEMENT

ಹೇಗೆ ಗುರುತಿಸುತ್ತದೆ ?
ರಿಯಲ್‌ ಎಸ್ಟೇಟ್‌ ತೆರಿಗೆ, ಮನೆ ನಿರ್ಮಾಣದಲ್ಲಿ ಮಿತಿಮೀರಿದ ವೆಚ್ಚ, ಬ್ಯಾಂಕ್‌ಗಳ ಹೊಸ ಶಾಖೆ ಸ್ಥಾಪನೆ ಹಾಗೂ ಹೊಸ ಕಂಪೆನಿಗಳ ಸೃಷ್ಟಿ ಮೂಲಕ ಸಾರ್ವಜನಿಕರಿಗೆ ಭ್ರಷ್ಟಾಚಾರ ಎಸಗಲು ಪ್ರೇರಣೆ ನೀಡುತ್ತದೆ. ಇದನ್ನು ಒಟ್ಟಾರೆಯಾಗಿ ತಾಳೆಹಾಕಿ ನಿಯಂತ್ರಣಕ್ಕೆ ತಂದರೆ, ಸಾರ್ವಜನಿಕ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು’ ಎಂದು ಅಂಕಿಅಂಶದಲ್ಲಿ ವಿವರಿಸಲಾಗಿದೆ.

‘ಬಹುಮತ ಹೊಂದಿದ ಒಂದೇ ಪಕ್ಷದ ಸರ್ಕಾರವು ದೀರ್ಘಕಾಲ ಅಧಿಕಾರ ಹಿಡಿದರೆ, ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತದೆ. ಇದು ಎಲ್ಲ ಪ‍ಕ್ಷಗಳಿಗೂ ಅನ್ವಯವಾಗುತ್ತದೆ’ ಎಂದು ವಿ.ವಿಯ ಸಂಶೋಧಕ ಇವಾನ್‌ ಪಾಸ್ತಾರ್‌ ತಿಳಿಸಿದ್ದಾರೆ.

2000ನೇ ಇಸವಿಯಿಂದ 2012ರ ತನಕ ಸ್ಪೇನ್‌ನಲ್ಲಿ ನಡೆದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ಅಧ್ಯಯನ ನಡೆಸಿ ಈ ಸಂಶೋಧನೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.