ಮ್ಯಾನ್ಮಾರ್‌ನಿಂದ ಹೊರಟಿದ್ದ ದೋಣಿಯಲ್ಲಿ ಸಿಕ್ಕಿಬಿದ್ದ 5,500 ಕೆ.ಜಿಯಷ್ಟು ಮಾದಕವಸ್ತುಗಳನ್ನು ಅಂಡಮಾನ್ ಸಮುದ್ರದಲ್ಲಿ ಭಾರತೀಯ ಕರಾವಳಿ ಪಡೆಯು ಮಂಗಳವಾರ ವಶಪಡಿಸಿಕೊಂಡಿತು
– ಪಿಟಿಐ ಚಿತ್ರ
ಶ್ರೀ ವಿಜಯ ಪುರಂ: ‘ಬೈರನ್ ದ್ವೀಪದ ಸಮೀಪ ದೋಣಿಯೊಂದರಲ್ಲಿ 5,500 ಕೆ.ಜಿಯಷ್ಟು ನಿಷೇಧಿತ ‘ಮೆಥಂಫೆಟಮೀನ್’ ಎಂಬ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಭಾರತೀಯ ಕರಾವಳಿ ಪಡೆ (ಐಸಿಜಿ) ಮಂಗಳವಾರ ಹೇಳಿದೆ. ‘ಇತಿಹಾಸದಲ್ಲಿಯೇ ನಾವು ಇಷ್ಟೊಂದು ದೊಡ್ಡ ಪ್ರಮಾಣದ ಮಾದಕವಸ್ತುವನ್ನು ವಶಪಡಿಸಿಕೊಂಡಿರಲಿಲ್ಲ’ ಎಂದು ಐಸಿಜಿ ಹೇಳಿದೆ.
‘ಇಷ್ಟೊಂದು ಪ್ರಮಾಣದಲ್ಲಿ ಮಾದಕವಸ್ತು ದೊರೆತಿದೆ ಎಂದರೆ, ಇದೊಂದು ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲಕ್ಕೇ ಸೇರಿದ್ದಾಗಿರಬೇಕು. ದೋಣಿಯಲ್ಲಿದ್ದ ಆರು ಮಂದಿ ಮ್ಯಾನ್ಮಾರ್ ನಾಗರಿಕರನ್ನು ಬಂಧಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ‘ಪಿಟಿಐ’ಗೆ ತಿಳಿಸಿದರು.
‘ಈ ಪ್ರಮಾಣದ ಮಾದಕವಸ್ತುವು ಮ್ಯಾನ್ಮಾರ್‌ನಿಂದ ಥಾಯ್ಲೆಂಡ್‌ಗೆ ಸಾಗಣೆಯಾಗುತ್ತಿತ್ತು. ದೋಣಿಯಲ್ಲಿ ಕೆಲವು ಸ್ಯಾಟಲೈಟ್ ಫೋನ್‌ಗಳು ದೊರೆತಿವೆ. ಈ ಫೋನ್‌ಗಳಿಂದ ಯಾರಿಗೆಲ್ಲಾ ಕರೆಗಳನ್ನು ಮಾಡಲಾಗಿದೆ ಎಂಬ ಕುರಿತು ತನಿಖೆ ನಡೆಯುತ್ತಿದೆ. ಬಂಧಿತರು ಜಾಲದ ಕುರಿತು ಯಾವ ಮಾಹಿತಿಯನ್ನೂ ನೀಡುತ್ತಿಲ್ಲ’ ಎಂದರು.
ಮ್ಯಾನ್ಮಾರ್‌ನಿಂದ ಹೊರಟಿದ್ದ ದೋಣಿಯಲ್ಲಿ ಸಿಕ್ಕಿಬಿದ್ದ 5500 ಕೆ.ಜಿಯಷ್ಟು ಮಾದಕವಸ್ತುಗಳನ್ನು ಅಂಡಮಾನ್ ಸಮುದ್ರದಲ್ಲಿ ಭಾರತೀಯ ಕರಾವಳಿ ಪಡೆಯು ಮಂಗಳವಾರ ವಶಪಡಿಸಿಕೊಂಡಿತು
ಅಂಡಮಾನ್ ಸಮುದ್ರದಲ್ಲಿ ಇದುವರೆಗೂ ಇಷ್ಟೊಂದು ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಿಲ್ಲ. ಕ್ರಿಸ್‌ಮಸ್‌ನಲ್ಲಿ ಹಾಗೂ ಹೊಸ ವರ್ಷ ಆಚರಣೆಯ ಮುನ್ನಾ ದಿನದಂದು ಥಾಯ್ಲೆಂಡ್‌ನಲ್ಲಿ ದೊಡ್ಡ ಪ್ರಮಾಣದ ಮಾದಕವಸ್ತುಗಳಿಗೆ ಬೇಡಿಕೆ ಇರುತ್ತದೆ. ಇದಕ್ಕಾಗಿಯೇ ಮಾದಕವಸ್ತುಗಳು ಸಾಗಣೆಯಾಗುತ್ತಿದ್ದವು ಅನ್ನಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದ ಜಾಲಗಳಾದ ‘ಎಲ್ ಮೆಂಚೊ’ ಅಥವಾ ‘ಎಲ್ ಚಾಪೊ’ಗೆ ಈ ಮಾದಕವಸ್ತುಗಳನ್ನು ಬಹುಶಃ ತಲುಪಿಸಲಾಗುತ್ತಿತ್ತು. ಮಾದಕವಸ್ತುಗಳನ್ನು ಟೀ ಪೊಟ್ಟಣಗಳ ಒಳಗೆ ಇರಿಸಲಾಗಿತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.