ADVERTISEMENT

ಮಾಲ್ಡೀವ್ಸ್‌ ರಾಜಕೀಯ ಬಿಕ್ಕಟ್ಟು ಬಗ್ಗೆ ಮೋದಿ–ಟ್ರಂಪ್‌ ದೂರವಾಣಿಯಲ್ಲಿ ಚರ್ಚೆ

ಏಜೆನ್ಸೀಸ್
Published 9 ಫೆಬ್ರುವರಿ 2018, 7:04 IST
Last Updated 9 ಫೆಬ್ರುವರಿ 2018, 7:04 IST
ಮಾಲ್ಡೀವ್ಸ್‌ ರಾಜಕೀಯ ಬಿಕ್ಕಟ್ಟು ಬಗ್ಗೆ ಮೋದಿ–ಟ್ರಂಪ್‌ ದೂರವಾಣಿಯಲ್ಲಿ ಚರ್ಚೆ
ಮಾಲ್ಡೀವ್ಸ್‌ ರಾಜಕೀಯ ಬಿಕ್ಕಟ್ಟು ಬಗ್ಗೆ ಮೋದಿ–ಟ್ರಂಪ್‌ ದೂರವಾಣಿಯಲ್ಲಿ ಚರ್ಚೆ   

ವಾಷಿಂಗ್‌ಟನ್‌ :ಮಾಲ್ಡೀವ್ಸ್‌ನಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಚರ್ಚೆ ಮಾಡಿದರು’ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

‘ಅಫ್ಘಾನಿಸ್ತಾನದಲ್ಲಿನ ಸ್ಥಿತಿ ಮತ್ತು ಇಂಡೊ–ಫೆಸಿಫಿಕ್‌ ವಲಯದಲ್ಲಿ ಭದ್ರತೆ ಬಲಪಡಿಸುವ ವಿಚಾರಗಳನ್ನು ಈ ಇಬ್ಬರ ನಾಯಕರು ಚರ್ಚಿಸಿದರು’.

‘ಮಾಲ್ಡೀವ್ಸ್‌ನಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯಕರು, ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಮತ್ತು ಕಾನೂನನ್ನು ಗೌರವಿಸುವ ಅಗತ್ಯವಿದೆ ಎಂಬ ಅಭಿಪ್ರಾಯಪಟ್ಟರು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ದಕ್ಷಿಣ ಏಷ್ಯಾದ ಸ್ಥಿತಿಗತಿ ಪ್ರಸ್ತಾಪಿಸಿದ ಟ್ರಂಪ್‌, ಅಫ್ಘಾನಿಸ್ತಾನದಲ್ಲಿ ಭದ್ರತೆ ಮತ್ತು ಸ್ಥಿರತೆ ಸ್ಥಾಪಿಸುವ ಮಾತನ್ನು ಪುನರುಚ್ಛರಿಸಿದರು. ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತರ ಕುರಿತ ಅಭಿಪ್ರಾಯಗಳನ್ನು ನಾಯಕರು ವಿನಿಮಯ ಮಾಡಿಕೊಂಡರು’ ಎಂದು ತಿಳಿಸಿದೆ.

ಮ್ಯಾನ್ಮರ್‌ ಮತ್ತು ಬ್ಲಾಂಗಾದೇಶ ಇತ್ತೀಚೆಗೆ ದ್ವಿಪಕ್ಷಿಯ ಒಪ್ಪಂದ ಮಾಡಿಕೊಂಡಿವೆ. ಇದರ ಅನುಸಾರ ಬಾಂಗ್ಲಾದಲ್ಲಿನ ನಿರಾಶ್ರಿತರು ಮ್ಯಾನ್ಮರ್‌ಗೆ ಮರಳಲು ಅನುಮತಿ ಸಿಕ್ಕಿದೆ. ಆದರೆ ರೊಹಿಂಗ್ಯಾ ಮುಸ್ಲಿಂಮರು ಮರಳಲು ಇದು ಸೂಕ್ತ ಕಾಲವಲ್ಲ ಎಂದು ಅಮೆರಿಕಾ ವಾದಿಸುತ್ತಿದೆ.

‘ಉತ್ತರ ಕೋರಿಯಾವನ್ನು ಅಣ್ವಸ್ತ್ರ ರಹಿತ ಮಾಡುವ ಮಾತುಗಳು ಪ್ರಸ್ತಾಪವಾದವು. ಭದ್ರತೆ ಮತ್ತ ಆರ್ಥಿಕ ಸಹಕಾರದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಕ್ಷಣಾ ಮತ್ತು ವಿದೇಶಾಂಗ ಸಚಿವರುಗಳ ಭೇಟಿ ಏರ್ಪಡಿಸಲು ನಾಯಕರು ಒಪ್ಪಿದರು’ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.