ADVERTISEMENT

ಶ್ವೇತಭವನಕ್ಕೆ ಶೇ 61ರಷ್ಟು ಮಹಿಳೆಯರನ್ನು ನೇಮಿಸಿದ ಜೋ ಬೈಡನ್‌

ಆಡಳಿತಕ್ಕೆ ಹೊಸ ಸ್ಪರ್ಶ ನೀಡಲು ಮುಂದಾದ ಬೈಡನ್‌, ಕಮಲಾ ಹ್ಯಾರಿಸ್‌

ಪಿಟಿಐ
Published 31 ಡಿಸೆಂಬರ್ 2020, 6:17 IST
Last Updated 31 ಡಿಸೆಂಬರ್ 2020, 6:17 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಶ್ವೇತಭನದ ವಿವಿಧ ಹುದ್ದೆಗಳಿಗೆ ಶೇಕಡ 61ರಷ್ಟು ಮಹಿಳೆಯರನ್ನು ನೇಮಿಸಿದ್ದಾರೆ.

ಜತೆಗೆ, ಒಟ್ಟು ನೇಮಕಾತಿಯಲ್ಲಿ ಶೇಕಡ 54ರಷ್ಟು ಮಂದಿ ಕಪ್ಪು ವರ್ಣೀಯರು ಇದ್ದಾರೆ ಎಂದು ಬೈಡನ್‌ ಅವರ ತಂಡ ತಿಳಿಸಿದೆ.

ಜೋ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ನೇತೃತ್ವದ ಆಡಳಿತವು ವೈವಿಧ್ಯತೆಯ ಸಿದ್ಧಾಂತ ಮತ್ತು ಹಿನ್ನೆಲೆಯನ್ನು ಒಳಗೊಳ್ಳಲಿದೆ. ದೇಶವು ಎದುರಿಸುತ್ತಿರುವ ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿಭಾವಂತರಿಗೂ ಪ್ರೋತ್ಸಾಹ ನೀಡಲಾಗುವುದು ಎಂದು ಈ ತಂಡ ತಿಳಿಸಿದೆ.

ADVERTISEMENT

ಆಡಳಿತಕ್ಕೆ ಹೊಸ ಸ್ಪರ್ಶ ನೀಡಲು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ಮತ್ತು ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಅವರು ಬುಧವಾರ 100 ಸದಸ್ಯರನ್ನು ವಿವಿಧ ಹುದ್ದೆಗಳಿಗೆ ನೇಮಿಸಿದ್ದಾರೆ. ಇವರಲ್ಲಿ ತೃತೀಯ ಲಿಂಗಿಗಳು ಸಹ ಶೇಕಡ 11ರಷ್ಟು ಇದ್ದಾರೆ.

ಅತ್ಯುತ್ತಮ ಕೌಶಲ ಹೊಂದಿರುವ ಈ ಪ್ರತಿಭಾವಂತರು ಎಲ್ಲ ತೊಡಕುಗಳನ್ನು ನಿವಾರಿಸಿ ಅಮೆರಿಕದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಈ ನೇಮಕಾತಿ ಪಡೆದವರಲ್ಲಿ ಶೇಕಡ 40ರಷ್ಟು ಹಿರಿಯರಿಗೆ ಮಕ್ಕಳಿದ್ದಾರೆ ಎಂದು ಬೈಡನ್‌ ತಂಡ ತಿಳಿಸಿದೆ.

‘ಅಮೆರಿಕದ ವೈವಿಧ್ಯತೆಯನ್ನು ಬಿಂಬಿಸುವ ತಂಡ ಆಡಳಿತದಲ್ಲಿರಬೇಕು ಎಂದು ನಾನು ಮತ್ತು ಕಮಲಾ ಹ್ಯಾರಿಸ್‌ ಆರಂಭದಲ್ಲೇ ನಿರ್ಧರಿಸಿದ್ದೇವು. ವೈವಿಧ್ಯಮಯ ತಂಡಗಳಿದ್ದರೆ ಉತ್ತಮ ಪ್ರಗತಿ ಸಾಧಿಸಬಹುದು. ಜತೆಗೆ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು’ ಎಂದು ಬೈಡನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.