ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಸೂಪರ್‌ ಟೈಫೂನ್‌ ಅಟ್ಟಹಾಸ: ಭೀಕರ ಚಂಡಮಾರುತಕ್ಕೆ 112 ಸಾವು

ಏಜೆನ್ಸೀಸ್
Published 19 ಡಿಸೆಂಬರ್ 2021, 18:35 IST
Last Updated 19 ಡಿಸೆಂಬರ್ 2021, 18:35 IST
ಚಂಡಮಾರುತದ ಪರಿಣಾಮವಾಗಿ ಮನೆಗಳು ಉರುಳಿ ಬಿದ್ದಿರುವುದು
ಚಂಡಮಾರುತದ ಪರಿಣಾಮವಾಗಿ ಮನೆಗಳು ಉರುಳಿ ಬಿದ್ದಿರುವುದು    

ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ‘ರೈ’ ಚಂಡಮಾರುತದ ಪರಿಣಾಮ ಮೃತಪಟ್ಟವರ ಸಂಖ್ಯೆ 112ಕ್ಕೇ ಏರಿದೆ. ಭಾನುವಾರವೇ 65 ಜನ ಮೃತಪಟ್ಟಿದ್ದಾರೆ ಎಂದು ಸೆಂಟ್ರಲ್‌ ಫಿಲಿಪ್ಪೀನ್ಸ್‌ ಪ್ರಾಂತ್ಯದ ಗವರ್ನರ್‌ ತಿಳಿಸಿದ್ದಾರೆ.

ಚಂಡಮಾರುತದ ತೀವ್ರತೆಗೆ ದ್ವೀಪರಾಷ್ಟ್ರದ ಬಹುತೇಕ ಪಟ್ಟಣಗಳು ಗುರಿಯಾಗಿವೆ. 10 ಜನ ನಾಪತ್ತೆಯಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಸಂಪರ್ಕ ಕೊರತೆಯಿಂದ ಇನ್ನೂ 33 ಮೇಯರ್‌ಗಳು ವಸ್ತುಸ್ಥಿತಿ ವರದಿ ಕಳುಹಿಸಿಲ್ಲ. ಹೀಗಾಗಿ, ಮೃತರ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಗವರ್ನರ್ ಅರ್ತುರ್‌ ಯಾಪ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT