ADVERTISEMENT

ಮಾರಿಬ್‌: 80 ಉಗ್ರರು; 18 ಸೈನಿಕರು ಹತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 6:38 IST
Last Updated 9 ಸೆಪ್ಟೆಂಬರ್ 2021, 6:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ (ಎಎಫ್‌ಪಿ): ಯೆಮೆನ್‌ನ ಭದ್ರಕೋಟೆ ಮಾರಿಬ್ ನಗರಕ್ಕಾಗಿ ನಡೆದ ಹೋರಾಟದಲ್ಲಿ ಸುಮಾರು 80 ಬಂಡುಕೋರರು ಮತ್ತು ಸರ್ಕಾರದ 18 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಸೇನಾ ಮೂಲ
ಗಳು ಬುಧವಾರ ಎಎಫ್‌ಪಿಗೆ ತಿಳಿಸಿವೆ.

‘60 ಮಂದಿ ಹುತಿ ಬಂಡುಕೋರರು ಹತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ 24 ಗಂಟೆಗಳಲ್ಲಿ ನಡೆಸಿದ ವಾಯುದಾಳಿಯಲ್ಲಿ ಹತರಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ನಡೆದ ಘರ್ಷಣೆಯಲ್ಲಿ ಸರ್ಕಾರಿ ಪರವಾದ18 ಸೈನಿಕರು ಹತರಾಗಿದ್ದು, ಡಜನ್‌ಗಟ್ಟಲೆ ಸೈನಿಕರು ಗಾಯಗೊಂಡಿದ್ದಾರೆ’ ಎಂದು ಸರ್ಕಾರಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಬೆಂಬಲವಿರುವ ಯೆಮೆನ್ ಸರ್ಕಾರ ಮತ್ತು ಇರಾನ್ ಮಿತ್ರಪಡೆ ಹುತಿ ಬಂಡುಕೋರರ ನಡುವಿನ ಯುದ್ಧಗಳು ಇತ್ತೀಚಿನ ದಿನಗಳಲ್ಲಿ ಮರೀಬ್ ಪ್ರಾಂತ್ಯದಲ್ಲಿ ತೀವ್ರಗೊಂಡಿವೆ. ವಾಯು ದಾಳಿಗಳೂ ತೀವ್ರಗೊಂಡಿವೆ. ಸೇನಾಪಡೆಗಳು ದಂಗೆಕೋರರನ್ನು ಹಿಮ್ಮೆಟ್ಟಿಸಿವೆ’ ಎಂದು ಹೆಸರು ಬಹಿರಂಗಪಡಿಸದ ಸೇನಾಧಿಕಾರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.