ADVERTISEMENT

ಕೋವಿಡ್‌–19 | ಏಪ್ರಿಲ್‌ನಲ್ಲಿ ನಿತ್ಯ 80 ಸಾವಿರ ಹೊಸ ಪ್ರಕರಣ

ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ
Published 7 ಮೇ 2020, 21:37 IST
Last Updated 7 ಮೇ 2020, 21:37 IST
   

ವಿಶ್ವಸಂಸ್ಥೆ: ಏಪ್ರಿಲ್‌ನಲ್ಲಿ ಪ್ರತಿದಿನ ಸರಾಸರಿ 80 ಸಾವಿರ ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

‘ಇದುವರೆಗೆ ಮೂವತ್ತು ಲಕ್ಷಕ್ಕೂ ಹೆಚ್ಚು ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಸುಮಾರು ಎರಡೂವರೆ ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್ ಆರಂಭದಿಂದಲೇ ಪ್ರತಿನಿತ್ಯವೂ ವಿಶ್ವಸಂಸ್ಥೆಗೆ ಸರಾಸರಿ 80 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಮಾಹಿತಿ ನೀಡಿದ್ದಾರೆ.

‘ಕೋವಿಡ್‌–19 ವಿರುದ್ಧ ಹೋರಾಡುತ್ತಲೇ ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆ ಚೇತರಿಸಿಕೊಳ್ಳಲು ದೇಶಗಳು ಅಡಿಪಾಯ ಹಾಕಬೇಕು. ಆರೋಗ್ಯಕ್ಕಾಗಿ ಹೂಡಿಕೆ ಮಾಡುವುದರಿಂದ ಜೀವಗಳನ್ನು ಉಳಿಸಬಹುದು ಎಂಬುದು ನಾವು ಕೋವಿಡ್‌–19ನಿಂದ ಕಲಿತ ಪಾಠವಾಗಿದೆ. ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಎಲ್ಲಕ್ಕಿಂತಲೂ ಜಾಣತನ ಎಂಬುದು ಇದರಿಂದ ಸಾಬೀತಾಗಿದೆ’ಎಂದರು.

ADVERTISEMENT

ದಕ್ಷಿಣ ಏಷ್ಯಾದ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಪಶ್ಚಿಮ ಯುರೋಪಿನ ರಾಷ್ಟ್ರಗಳಲ್ಲಿ ಸೋಂಕು ಕ್ಷೀಣಿಸಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.